ಶ್ರೀನಿಧಿ, ಶ್ರೇಯಸ್ ಕಾರ್ಖಾನೆ ಶೀಘ್ರ ಶುರುವಾಗಲಿ

17DND1
Published on

ದಾಂಡೇಲಿ: 2019ರ ಅಕ್ಟೋಬರ್ 22ರಿಂದ ಮುಚ್ಚಲ್ಪಟ್ಟಿದ್ದ ನಗರದ ಶ್ರೇಯಸ್ ಮತ್ತು ಶ್ರೀನಿಧಿ ಕಾಗದ ಕಾರ್ಖಾನೆ ಬೇಗ ಪುನರಾರಂಭಗೊಂಡು ಆದಷ್ಟು ಬೇಗ ಉತ್ಪಾದನೆ ಆರಂಭಿಸಲಿ ಎಂದು ಕಾರ್ವಿುಕ ಸೇನಾದ ಮುಖಂಡ ಬಿ.ಡಿ. ಹಿರೇಮಠ ಮತ್ತು ಕಾರ್ಖಾನೆಯ ಹಳೆಯ ಮಾಲೀಕರ ಆಡಳಿತ ಮಂಡಳಿಯ ಪ್ರತಿನಿಧಿ ಆನಂದ ಗರಗ ಹೇಳಿದರು.

ಕಾರ್ಖಾನೆಯ ಪ್ರವೇಶ ದ್ವಾರಕ್ಕೆ ಶನಿವಾರ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕಾರ್ವಿುಕ ಸೇನಾ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿ, ಬೆಳಗಾವಿಯ ಕಾರ್ವಿುಕ ಇಲಾಖೆಯ ಉಪ ಕಾರ್ವಿುಕ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀನಿಧಿ, ಶ್ರೇಯಸ್ ಕಾರ್ಖಾನೆ ಆರಂಭಿಸಲು ಮುಂದೆ ಬಂದಿರುವ ಹುಬ್ಬಳ್ಳಿಯ ಆನಂದ ಪೇಪರ್ ಕಾರ್ಖಾನೆಯ ನಿರ್ದೇಶಕ ಪ್ರದೀಪ ಅರಕೇರಿ, ಹಳೇ ಆಡಳಿತ ಮಂಡಳಿಯ ಪ್ರತಿನಿಧಿ ಆನಂದ ಗರಗ ಉಪಸ್ಥಿತಿಯಲ್ಲಿ ಕಾರ್ಖಾನೆ ಪುನರಾರಂಭದ ಕುರಿತು ರ್ಚಚಿಸಲಾಯಿತು ಎಂದರು.

ಸಭೆಯಲ್ಲಿ ಕಾರ್ಖಾನೆ ಬಂದ್ ಆದ ಅವಧಿಯಲ್ಲಿ ಕಾರ್ವಿುಕರಿಗೆ ಬಾಕಿ 8 ಕೋಟಿ ರೂ. ದೊರೆಯಬೇಕಿದೆ. ಕಾರ್ಖಾನೆ ಆರಂಭಿಸಲು ಬಂದಿರುವ ಆನಂದ ಪೇಪರ್ ಕಾರ್ಖಾನೆಯ ನಿರ್ದೇಶಕರು 2.31 ಕೋ.ರೂ. ಮೊತ್ತದ ಚೆಕ್ ಅನ್ನು ಉಪ ಆಯುಕ್ತರಿಗೆ ಶುಕ್ರವಾರ ನೀಡಿದ್ದಾರೆ. ಕಾರ್ವಿುಕರಿಗೆ ನೀಡಬೇಕಾದ ಉಳಿದ ಮೊತ್ತಕ್ಕೆ ಕಾರ್ಖಾನೆಯ ಹಿಂದಿನ ಮಾಲೀಕ ಆರ್.ಆರ್. ನಾಯ್ಕ ಜವಾಬ್ದಾರಿಯಾಗಿರುತ್ತಾರೆ. ಬರಬೇಕಾದ ಬಾಕಿ ಮೊತ್ತದ ಸಲುವಾಗಿ ಕಾರ್ವಿುಕ ಸೇನೆ ಸಂಘ ಕಾರ್ಖಾನೆ ಆರಂಭದ ನಂತರ ಮುಂದಿನ ಕ್ರಮದ ಬಗ್ಗೆ ಹೋರಾಡಲಿದೆ ಎಂದರು.

ಶ್ರೀನಿಧಿ, ಶ್ರೇಯಸ್ ಕಾರ್ಖಾನೆಗಳು ಕಾರ್ವಿುಕರ ಹಿತದೃಷ್ಟಿಯಿಂದ ಶೀಘ್ರದಲ್ಲಿ ಆರಂಭವಾಗಲು ಉತ್ತಮ ಅವಕಾಶ ದೊರೆತಿದೆ. ಬಂದ್ ಆದ ಕಾರ್ಖಾನೆಗಳನ್ನು ಆರಂಭಿಸಲು ಹುಬ್ಬಳ್ಳಿಯ ಆನಂದ ಪೇಪರ್ ಕಾರ್ಖಾನೆ ಮುಂದೆ ಬಂದಿದೆ. ಕಾರ್ಖಾನೆಯನ್ನು ಲಾಭದಾಯಕವಾಗಿ ಮುಂದುವರೆಸಿಕೊಂಡು ಹೋಗಲು ಆಡಳಿತ ಮಂಡಳಿಗೆ ಸಹಕಾರ ನೀಡುವುದಾಗಿ ಎಲ್ಲ ಕಾರ್ವಿುಕರ ಪರವಾಗಿ ಬಿ.ಡಿ. ಹಿರೇಮಠ ಭರವಸೆ ನೀಡಿದರು.

ಕಾರ್ಖಾನೆಗಳ ಹಿಂದಿನ ಮಾಲೀಕರ ಆಡಳಿತ ಮಂಡಳಿ ಪ್ರತಿನಿಧಿ ಆನಂದ ಗರಗ, ಕಾರ್ವಿುಕ ಸೇನಾ ಸೇವಾ ಸಂಘದ ಕಾರ್ಯದರ್ಶಿ ಸಂಜು ಕಾಲಗಿನಕರ್, ಪ್ರಧಾನ ಕಾರ್ಯದರ್ಶಿ ಮುನಾಫ್ ನದಾಫ್, ಖಜಾಂಚಿ ಪ್ರಶಾಂತ ನಾಯ್ಕ, ಮಂಜುನಾಥ ಚಾಪಗಾಂವಕರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net