ಶ್ರೀಕೃಷ್ಣನ ವಿಚಾರಧಾರೆಗೆ ಎಂದಿಗೂ ಸೋಲಿಲ್ಲ

web 1
Published on

ಚಿಕ್ಕಮಗಳೂರು: ರಾಮಾಯಣ ಮತ್ತು ಮಹಾಭಾರತ ಪೂರ್ವಿಕರು ನಾಡಿಗಾಗಿ ನೀಡಿರುವ ಉದಾತ್ತ ಮೌಲ್ಯಗಳ ಸಂಗ್ರಹವಾಗಿದೆ. ಶ್ರೀಕೃಷ್ಣ ಹಾಗೂ ಪುರಾಣದಲ್ಲಿರುವ ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಎಂದಿಗೂ ಸೋಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಪರಿಪಾಲಕನಾಗಿ ಹೋರಾಡುವ ಆತನ ವ್ಯಕ್ತಿತ್ವ, ರಾಜನೀತಿ, ಆಡಳಿತ ಇಂದಿಗೂ ಮಾದರಿ. ಧರ್ಮ ಎಂಬುದು ಕೇವಲ ಒಂದು ಮತವಲ್ಲ, ಅದು ಎಲ್ಲರ ಒಳಿತು ಬಯಸುವ ಉದಾರ ಮೌಲ್ಯವಾಗಿದೆ. ಭಾರತೀಯ ಇತಿಹಾಸ-ಪುರಾಣದಲ್ಲಿ ವಿಶೇಷ ಉದಾತ್ತ ಮೌಲ್ಯಗಳ ವ್ಯಕ್ತಿತ್ವ ಹೊಂದಿದ್ದ ರಾಜನೀತಿ ನಿಪುಣ-ಧರ್ಮದ ಪರಿಪಾಲಕ ಶ್ರೀಕೃಷ್ಣ ನಮ್ಮೆಲ್ಲರಿಗೂ ಮಾದರಿ ಎಂದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸಿಇಒ ಎಸ್.ಪೂವಿತಾ, ಎಸ್ಪಿ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net