ಶ್ರೀ ಸಿದ್ದರಾಮೇಶ್ವರ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ

7KDR1 web
Published on

ಕಡೂರು: ಪಟ್ಟಣದಲ್ಲಿ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.  ಕೆ.ಹೊಸಳ್ಳಿಯ ಯಳನಡು ಮಠದಲ್ಲಿ ಅಲಂಕೃತಗೊಂಡ ಸ್ವಾಮಿಯ ಅಡ್ಡಪಲ್ಲಕ್ಕಿಗೆ ಯಳನಡುಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ರೇಲ್ವೆಗೇಟ್ ಮಾರ್ಗದಿಂದ ಕೆ.ಎಂ.ರಸ್ತೆ, ಗಣಪತಿ-ಆಂಜನೇಯ ಸ್ವಾಮಿ, ಕೆಎಲ್​ವಿ ವೃತ್ತ, ಬಿ.ಎಚ್.ರಸ್ತೆ, ಬಸವೇಶ್ವರ ವೃತ್ತ, ಯು.ಬಿ.ರಸ್ತೆ, ಸಂಗೊಳ್ಳಿರಾಯಣ್ಣ ವೃತ್ತದಿಂದ ಹಳೇಬಸ್ಟ್ಯಾಂಡ್ ರಸ್ತೆ, ಕದಂಬ ವೃತ್ತ, ಜೈನ್ ಟೆಂಪಲ್ ರಸ್ತೆ ಮಾರ್ಗದ ಮೂಲಕ ಪುನಃ ಯಳನಡು ಮಠದವರೆಗೆ ಸುಮಾರು 4 ಕಿಮೀವರೆಗೂ ವಿಶೇಷವಾಗಿ ಉತ್ಸವ ನಡೆಸಲಾಯಿತು.

ಮೆರವಣಿಗೆ ಉದ್ದಕ್ಕೂ ತೆಂಗಿನಕಾಯಿ ಒಡೆದು, ಕರ್ಪರ ಹಚ್ಚುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ವೀರಗಾಸೆ, ಕೀಲುಕುದುರೆ, ಗೊಂಬೆಮೇಳ, ಜಾಂಡೇವು ಕುಣಿತದೊಂದಿಗೆ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net