ಜಗತ್ಪ್ರಸೂತಿ ಅಲಂಕಾರ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದೆ

web 2
Published on

ಶೃಂಗೇರಿ: ಅಧಿಕ ಅಶ್ವಯುಜ ಕೃಷ್ಣ ಅಮಾವಾಸ್ಯೆ ಅಂಗವಾಗಿ ಶುಕ್ರವಾರ ಶೃಂಗೇರಿಯ ಶ್ರೀ ಶಾರದೆಗೆ ಫಲ-ಪಂಚಾಮೃತ ಅಭಿಷೇಕ, ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ಹಾಗೂ 108 ಬಾರಿ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಿತು.

ಶ್ರೀಮಠದ ಸಂಪ್ರದಾಯದಂತೆ ಶ್ರೀಮಠದ ಪುರೋಹಿತರು ಧಾರ್ವಿುಕ ಕಾರ್ಯಕ್ರಮ ನೆರವೇರಿಸಿದ ಬಳಿಕ ಉಭಯ ಜಗದ್ಗುರುಗಳು ನರಸಿಂಹವನದ ಗುರು ನಿವಾಸದಲ್ಲಿ ಬೆಳಗ್ಗೆ 9.30ರಿಂದ ಭಕ್ತಾದಿಗಳಿಗೆ ದರ್ಶನ ನೀಡಿದರು. ನಂತರ ಶ್ರೀಮಠಕ್ಕೆ ಆಗಮಿಸಿದ ಯತಿವರ್ಯರಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ ದೇಗುಲದ ಒಳಗೆ ಸ್ವರ್ಣರಥೋತ್ಸವ ಹಾಗೂ ದರ್ಬಾರು ಕಾರ್ಯಕ್ರಮ ದೇವಾಲಯದ ಒಳಾಂಗಣದಲ್ಲಿ ಸಾಂಗವಾಗಿ ನೆರವೇರಿತು.

ಜಗತ್ಪ್ರಸೂತಿ ಅಲಂಕಾರ: ಮಂದಸ್ಮಿತೆಯಾದ ಶ್ರೀಶಾರದೆ ತನ್ನ ತೊಡೆಯಲ್ಲಿ ಮುದ್ದಾದ ಮಗುವನ್ನು ಮಲಗಿಸಿಕೊಂಡು ‘ಜಗತ್ತಿನ ಸೃಷ್ಟಿಗೆ ನಾನೇ ತಾಯಿ. ನೀನು ನನ್ನನ್ನು ನಿರಂತರ ಭಜಿಸು. ನಾನು ಮಗುವಿನಮತೆ ನಿನ್ನ ಕಾಪಾಡುತ್ತೇನೆ’ ಎಂದು ಭಕ್ತನನ್ನು ಕುರಿತು ಹೇಳುತ್ತಿರುವ ಜಗನ್ಮಾತೆ ಜಗತ್ಪ್ರಸೂತಿ ಅಲಂಕಾರದಲ್ಲಿ ಕಂಗೊಳಿಸಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net