ಶ್ರಾವಣ ಸದ್ವಿಚಾರ ಅರಿಯುವ ಮಾಸ

4
Published on

ಗೋಕಾಕ: ಗರಗದ ಮಡಿವಾಳೇಶ್ವರ ಶಿವಯೋಗಿಗಳು ಚರಿತ್ರೆ ಆಲಿಸುವ ಮೂಲಕ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹುಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ದೇವರು ಹೇಳಿದರು.

ನಗರದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗೇಶ್ವರ ವಿಕಾಸ ಸಮಿತಿ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿರುವ ಗರಗದ ಮಡಿವಾಳೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಡಿವಾಳೇಶ್ವರರು ವಿಶೇಷ ಜ್ಞಾನಿಗಳಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಮಹಾನುಭಾವ. ಒಳ್ಳೆಯ ಮಾತುಗಳನ್ನು ಕೇಳುವ ಮಾಸ ಶ್ರಾವಣವಾಗಿದೆ. ಇಂತಹ ಸತ್ಸಂಗದಲ್ಲಿ ಪಾಲ್ಗೊಂಡು ಮಹಾತ್ಮರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರವಚನಕಾರ ಡಾ.ಬಸವರಾಜ ಚೌಗಲಾ, ಸಮಿತಿಯ ಅಧ್ಯ ಜೀವಪ್ಪ ಬಡಿಗೇರ, ಅಶೋಕ ಗೋಣಿ, ಪ್ರೇಮಲತಾ ಕಡಗದ, ಅಮರಗುಂಡಪ್ಪ ಬಿಜ್ಜಳ, ಭೀಮಪ್ಪ ಗೋಲಬಾವಿ, ಜಟ್ಟೆಪ್ಪ ಭೋಸಗಾ, ವೀರಭದ್ರ ಶೇಬಣ್ಣವರ, ಲಕ್ಕಪ್ಪ ಕೊತ್ತಲ, ಉಮಾದೇವಿ ಹಿರೇಮಠ, ಉದಯ ಬನ್ನಿಶೆಟ್ಟಿ, ಸುನಂದಾ ಮನ್ನಿಕೇರಿ, ಬಸವರಾಜ ಕಾಪಶಿ, ಶಿವಶಂಕರ ದಾಸಪ್ಪನವರ, ಜಯಶ್ರೀ ಕರಿಗಾರ, ನಗರಸಭೆ ಸದಸ್ಯ ಶ್ರೀಶೆಲ ಯಕ್ಕುಂಡಿ, ಶಿವಾನಂದ ಹತ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net