ಶ್ರವಣಬೆಳಗೊಳ: ಜಡ್ಡುಗಟ್ಟಿದ ಹಾಗೂ ದೌರ್ಜನ್ಯದ ರಾಜಕೀಯ ವ್ಯವಸ್ಥೆ ಕೊನೆಯಾಗಬೇಕು ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಹೇಳಿದರು.
ಹೋಬಳಿಯ ಹುಳಿಗೆರೆ ಕೆರೆಗೆ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಶ್ರೀಕಂಠಯ್ಯನವರ ಹೋರಾಟದ ಫಲವಾಗಿ ಈ ಏತ ನೀರಾವರಿ ಯೋಜನೆ ಆರಂಭಗೊಂಡಿದ್ದರಿಂದ ಇಂದು ಸಾಕಾರಗೊಂಡಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ.
ಆದರೆ ಇಂದು ಕ್ಷೇತ್ರದ ಶಾಸಕರು ನಾನೇ ಮಾಡಿದ್ದೇನೆ ಎನ್ನುವಂತೆ ಫೋಟೋ ತೆಗೆಸಿಕೊಂಡು ತಿರುಗುತ್ತಿದ್ದಾರೆ. ಇದು ಅವರಿಗೆ ಶೋಭೆಯಲ್ಲ ಎಂದು ಟಾಂಗ್ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ರಂಜಿತಾ ನಿಂಗೇಗೌಡ, ಎನ್.ಡಿ.ಕಿಶೋರ್ ಮುಂತಾದವರಿದ್ದರು.