

ನರಗುಂದ: ಶಿಕ್ಷಣ ಮಹತ್ವದ ಸಂಗತಿಯಾಗಿದೆ. ಶಿಕ್ಷಣದಲ್ಲಿ ಶ್ರಮ ವಹಿಸಿ ಅಭ್ಯಾಸ ಮಾಡಿದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಚಿಕ್ಕನರಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ವಿ. ದಂಡನಾಯ್ಕರ್ ತಿಳಿಸಿದರು.
ತಾಲೂಕಿನ ಚಿಕ್ಕನರಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪಾಲಕರ ಸಭೆ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಮಕ್ಕಳನ್ನು ತೊಡಗಿಸಿ, ಮಕ್ಕಳಿಗೆ ವಿದ್ಯೆ ಬುದ್ಧಿ ನೀಡಬೇಕು. ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡರೆ ಜೀವನದಲ್ಲಿ ಯಶಸು ್ಸಸಾಧಿಸಲು ಮಕ್ಕಳಿಗೆ ಸುಲಭವಾಗುತ್ತದೆ. ಮಕ್ಕಳನ್ನು ಓದಿನೆಡೆಗೆ ಸಾಗಲು ಮಕ್ಕಳಿಗೆ ಸಲಹೆ ನೀಡಿ, ಮಕ್ಕಳು ಅಧ್ಯಯನ ಮಾಡುವುದನ್ನು ರೂಢಿಸಿಕೊಂಡು ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಶಿಕ್ಷಣದಲ್ಲಿ ಯಶ ಸಾಧಿಸಿ ಎಂದು ತಿಳಿಸಿದರು.
ಸಿಬಿಸಿ ಸದಸ್ಯರಾದ ಬಸವರಾಜ ತಳವಾರ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣದಲ್ಲಿ ತಂದೆ-ತಾಯಿಯ ಮಹತ್ವದ ಪಾತ್ರ ಕುರಿತು ವಿವರ ನೀಡಿದರು. ಎಫ್.ಎಸ್. ಅಂಗಡಿ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಮಂಜುನಾಥ ಬಾಚಿ ಉದ್ಘಾಟಿಸಿದರು. ಉಪನ್ಯಾಸಕಿ ಚೈತ್ರಾ ಓದೇಕಾರ ನಿರೂಪಿಸಿದರು.