

ಹಾಸನ: ದುದ್ದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಯನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮೂಡಿಸಿದರು.
ಸರ್ಕಾರದ ನಿರ್ದೇಶನದಂತೆ ತಾಲೂಕಿನ ಪಂಚಾಯಿತಿ ವ್ಯಾಪ್ತಿಯ ದುದ್ದ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿ.ಇ.ಓ ಅವರು, ಟೀ ಅಂಗಡಿಗಳು, ಬೇಕರಿ, ರಸ್ತೆ ಬದಿಗಳು, ಬಸ್ ಸ್ಟ್ಯಾಂಡ್, ಮನೆಗಳ ಸುತ್ತ ಮುತ್ತ ಹಾಗೂ ಸಂತೆ ನಡೆಯುವ ಸ್ಥಳಗಳಲ್ಲಿ ಕಸ ಸಂಗ್ರಹಣೆ ಮಾಡಿ ಸ್ವಚ್ಛಗೊಳಿಸಿದರು ಹಾಗೂ ಪ್ರತಿಯೊಬ್ಬರು ಸ್ವಚ್ಚತೆಯನ್ನು ಕಾಪಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಆಸ್ಪತ್ರೆ, ಶಾಲೆಗಳು, ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಹೆಚ್ಚಿನ ಗಮನವಹಿಸಬೇಕು ಹಾಗೂ ಡೆಂಗ್ಯೂ ಸೇರಿದಂತೆ ಇನ್ನಿತರ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಬದಿಗಳಲ್ಲಿ ಇರುವಂತಹ ಟೀ ಅಂಗಡಿಗಳು, ಬೇಕರಿ, ಉಪಹಾರ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು ಹಾಗೂ ಕಸ ಸಂಗ್ರಹಣೆ ಮಾಡಲು ಪ್ರತಿ ಅಂಗಡಿಗಳಲ್ಲೂ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡು ಕಸವನ್ನು ಆಟೋಗಳಿಗೆ ಹಾಕುವಂತೆ ಸೂಚನೆ ನೀಡಿದರು.
ಎಲ್ಲ ಅಂಗಡಿ ಮಾಲೀಕರುಗಳ ಸಭೆ ಕರೆದು ಸ್ವಚ್ಚತಯ ಬಗ್ಗೆ ಅರಿವು ಮೂಡಿಸಿ ಎಂದರು ಹಾಗೂ ಕಾಯಿಲೆಗಳು ಹರಡದಂತೆ ಮುಂಜಾಗ್ರತೆವಹಿಸಿ ಶಾಲೆ, ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳಿಗೆ ಔಷಧಿ ಸಿಂಪಡೆಣೆ ಮಾಡಿದರು.
ಪ್ರತಿ ಮನೆಯವರು ತಮ್ಮ ಮನೆಗಳ ಸುತ್ತಮುತ್ತ ಹಾಗೂ ಚರಂಡಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು ಎಂದರಲ್ಲದೆ ಟೀ ಅಂಗಡಿಗಳು, ಬೇಕರಿಗಳು, ಉಪಹಾರ ಕೇಂದ್ರಗಳು ಸೇರಿದಂತೆ ಮುಂತಾದ ಅಂಗಡಿಯವರು ಸ್ವಚ್ಚತೆಯನ್ನು ಕಾಪಡದಿದ್ದಲ್ಲಿ ದಂಡ ವಿಧಿಸುವಂತೆ ಪಿಡಿಓ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಖಾ, ದುದ್ದ ಹೋಬಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ,ತಾಲೂಕು ಪಂಚಾಯಿತಿ ಮತ್ತು ದುದ್ದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.