ಶ್ರಮದ ಫಲ ಹಂಚುವುದೇ ದಾಸೋಹ

S G dollegoudar
Published on

ಕಲಬುರಗಿ: ಬಸವಣ್ಣನವರ ದಾಸೋಹ ಪರಿಕಲ್ಪನೆಯು, ಶರಣರ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಯು ತನ್ನ ಶ್ರಮದಿಂದ ಸಂಪಾದಿಸಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವುದು, ಅಂದರೆ ಕಾಯಕವೇ ಕೈಲಾಸ ತತ್ವದ ಆಧಾರದ ಮೇಲೆ, ತನ್ನ ಶ್ರಮದ ಫಲ ಸಮಾಜದ ಇತರರೊಂದಿಗೆ ಹಂಚಿಕೊಳ್ಳುವುದು ದಾಸೋಹ. ಬರೀ ಆಹಾರ ಹಂಚಿಕೆಯಲ್ಲ, ದೈಹಿಕ, ಮಾನಸಿಕ ಮತ್ತು ರ‍್ಥಿಕ ಸಂಪನ್ಮೂಲ ಸಮಾಜದ ಹಿತಕ್ಕೆ ಸರ‍್ಪಿಸುವುದು ಎಂದು ಶರಣಬಸವ ವಿವಿ ಕುಲಸಚಿವ ಡಾ.ಎಸ್​.ಜಿ.ಡೊಳ್ಳೆಗೌಡರ್​ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರಾವಣ ಮಾಸದ ಶಿವಾನುಭವ ಸಾಂಸ್ಕತಿಕ ಕಾಯಕ್ರಮಗಳ ಉಪನ್ಯಾಸ ಮಾಲಿಕೆಯಲ್ಲಿ ರ‍್ನಾಟಕ ಸಾಂಸತಿಕ ನಾಯಕ ಬಸವಣ್ಣ ವಿಷಯದಡಿ ಬಸವಣ್ಣನವರ ದಾಸೋಹ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಿದರು.

ದೈಹಿಕ ಶ್ರಮದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವುದು. ಊಟ ಹಾಕುವುದು, ಕಷ್ಟದಲ್ಲಿರುವವರಿಗೆ ಸಹಾಯ. ಸಮಾಜದ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿ ಹೊಂದಿ, ನೋವಿಗೆ ಸ್ಪಂದಿಸುವುದು. ದಾಸೋಹ ಎಲ್ಲರೂ ಸಮಾನ ಎಂಬ ತತ್ವ ಎತ್ತಿಹಿಡಿಯುತ್ತದೆ. ದುಡಿಮೆ ಫಲ ಹಂಚಿಕೊಳ್ಳಬೇಕು ಎಂದು ಬಸವಣ್ಣ ಸಾರಿದ್ದಾರೆ. ದಾಸೋಹದಿಂದ ಬಡತನ, ಅಸಮಾನತೆ ಹೋಗಲಾಡಿಸುವ ಆತ್ಮತೃಪ್ತಿಯ ಸಾಧನ. ಬಸವಣ್ಣನವರ ದಾಸೋಹ ಪರಿಕಲ್ಪನೆಯು ಶ್ರಮದಿಂದ ಸಂಪಾದಿಸಿದ್ದನ್ನು ಸಮಾಜದ ಜತೆ ಹಂಚಿಕೊಳ್ಳುವುದು. ತನು, ಮನ, ಧನಗಳ ಸರ‍್ಪಣೆ ಎಂದರು.

ಮಹಾದಾಸೋಹಿ ಶರಣಬಸವೇಶ್ವರರು ದಾಸೋಹಕ್ಕೆ ಆದ್ಯತೆ ನೀಡಿದರು. ದಾಸೋಹ ಪೂಜ್ಯ ಡಾ.ಅಪ್ಪ ಮತ್ತು ಪೂಜ್ಯ ಡಾ.ಅವ್ವ ಮುನ್ನಡೆಸಿದ್ದಾರೆ. ಬಡತನ, ಶಿಕ್ಷಣ, ಆರೋಗ್ಯಕ್ಕೆ ಜೆ.ಆರ್​.ಡಿ ಟಾಟಾ, ವಿಪ್ರೋ ಕಂಪನಿಯ ಅಜೀಂ ಪ್ರೇಮಜಿ, ಇನ್ಫೋಸಿಸ್​ನ ನಾರಾಯಣಮರ‍್ತಿ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ಮರಿಸಿದರು. ಮಹಾದಾಸೋಹಿ ಶರಣಬಸವೇಶ್ವರ ಶಿವಜೀವನದ ಕುರಿತು ಮುದಗಲದ ಶ್ರೀ ಮಹಾಂತಸ್ವಾಮಿಗಳಿಂದ ಪ್ರವಚನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net