

ಮುನವಳ್ಳಿ: ಪ್ರಸ್ತುತ ದಿನಗಳಲ್ಲಿ ವಧು&ವರರ ಅನ್ವೇಷಣೆ ಬಲು ಕಷ್ಟದಾಯಕವಾಗಿದೆ. ಹೀಗಾಗಿ, ಗಂಡು&ಹೆಣ್ಣು ಆಯ್ಕೆ ವಿಷಯದಲ್ಲಿ ಆಸ್ತಿ, ಅಂತಸ್ತು ನೋಡದೆ, ಉತ್ತಮ ಕಾಯಕ ಹಾಗೂ ಸುಸಂಸತರಿಗೆ ಮಣೆ ಹಾಕಬೇಕು ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಜೈಂಟ್ಸ್ ಗ್ರೂಪ್ ಆ್ ಮುನವಳ್ಳಿ, ರಾಣಿ ಚನ್ನಮ್ಮ ಸಹೇಲಿ ಹಾಗೂ ಧಾರವಾಡದ ಆನಂದ ಅಸೋಸಿಯೇಟ್ಸ್ ಸಹಯೋಗದಲ್ಲಿ ಸಹಕಾರಿ ಧುರೀಣ ಉಮೇಶ ಬಾಳಿ ಅವರ 62ನೇ ಜನ್ಮದಿನದ ಅಂಗವಾಗಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವಧರ್ಮ ವಧು&ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬೈಲಹೊಂಗಲದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಇಂದಿನ ದಿನಗಳಲ್ಲಿ ಬಸವಾದಿ ಶರಣರ ತತ್ತ್ವ ಪಾಲಿಸುವ ವಧು&ವರರನ್ನು ಪರಸ್ಪರ ಆಯ್ಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ವೈವಾಹಿಕ ಜೀವನ ಸಮೃದಟಛಿವಾಗಲು ಸಾಧ್ಯ. ವಧು&ವರರ ಸಮಾವೇಶದಂಥ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಹಕಾರಿ ಧುರೀಣ ಉಮೇಶ ಬಾಳಿ ಸಮಾಜಮುಖಿ ಕಾರ್ಯ ಶ್ಲಾನೀಯ ಎಂದು ತಿಳಿಸಿದರು.
ಸಂಚಾಲಕ ಸುರೇಶ ಕುಪ್ಪಸಗೌಡ್ರ, ನಿವೃತ್ತ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿದರು. ಜೈಂಟ್ಸ್ ಗ್ರೂಪ್ ಅಧ್ಯ ಭುಜಂಗರಾವ್ ನಿಕ್ಕಂ ಅಧ್ಯತೆ ವಹಿಸಿದ್ದರು. ಜೈಂಟ್ಸ್ ವೆಲ್ೇರ್ ೌಂಡೇಷನ್ ಸ್ಪೇಷಲ್ ಕಮಿಟಿ ಸದಸ್ಯ ಗಜಾನನ ನೀಲಾಕಾರಿ, ರಾಹುಲ್ ಕಲೂತಿ, ಎ್.ಎಸ್.ಸಿದ್ದನಗೌಡ್ರ, ಧರೆಪ್ಪ ಆಲಗೂರ, ಡಾ.ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ರಾಜೇಶ ಅಂಗಡಿ, ಜಗದೀಶ ಮುನವಳ್ಳಿ, ವಿದ್ಯಾ ಬಾಳಿ, ಜೈಂಟ್ಸ್ ಗ್ರೂಪ್ ಸದಸ್ಯರಾದ ವಿರಾಜ ಕೊಳಕಿ, ಸಂಜು ತುಳಜಣ್ಣವರ, ಶಿವಾಜಿ ಮಾನೆ, ಎಸ್.ಬಿ.ಗಂಗಾವತಿ, ಅಪ್ಪು ಅಮಠೆ, ಎಂ.ಎಸ್.ಸರ್ವಿ, ಡಾ.ಎಂ.ಬಿ.ಅಷ್ಟಗಿಮಠ, ಅರುಣಗೌಡ ಪಾಟೀಲ, ಬಾಳು ಹೊಸಮನಿ, ಅನಿಲ ಕಿತ್ತೂರ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.