ಶ್ರಮ ವಹಿಸಿ ಅಭ್ಯಾಸ ಮಾಡಿ

Capture
Published on

ಬಸವಕಲ್ಯಾಣ: ವಿದ್ಯಾಥರ್ಿಗಳು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಶ್ರಮ ವಹಿಸಿ ಅಭ್ಯಾಸ ಮಾಡಬೇಕು. ಜತೆಗೆ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ಸಲಹೆ ನೀಡಿದರು.

ಮಂಠಾಳ ಗ್ರಾಮದಲ್ಲಿ ಗಂಗಾ ಕೋಚಿಂಗ್ ಸೆಂಟರ್ ಶುಕ್ರವಾರ ಆಯೋಜಿಸಿದ್ದ ಅಮೆರಿಕದ ಏಷಿಯಾ ವೇದಿಕ್ ಕಲ್ಚರ್ ಸಂಶೋಧನಾ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಮಂತ್ರ ಮಹಷರ್ಿ ಶ್ರೀ ಡಾ.ಎನ್.ಬಿ. ರಡ್ಡಿ ಗುರೂಜಿ ಅವರ ಗುರು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪಾಲಕರು ಕಾಳಜಿ ವಹಿಸಬೇಕು ಎಂದರು.

ಗಂಗಾ ಕೋಚಿಂಗ್ ಸೆಂಟರ್ ಅಧ್ಯಕ್ಷ ರವಿ ನಾಗೀನಕೇರೆ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಮೊದಲು ಗುರುಗಳ ಕೃಪೆ ಅವಶ್ಯಕ. ನಮ್ಮ ಸಂಸ್ಥೆಯಿಂದ ನವೋದಯ, ಕಿತ್ತೂರು ರಾಣಿ ಚನ್ನಮ್ಮ, ಮುರಾಜರ್ಿ ಹೀಗೆ ವಿವಿಧ ಶಾಲೆಗಳಲ್ಲಿ ವಿದ್ಯಾಥರ್ಿಗಳು ಪ್ರವೇಶ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಶ್ರೀ ಡಾ.ಎನ್.ಬಿ. ರಡ್ಡಿ ಮತ್ತು ಎಸ್ಪಿ ಡೆಕ್ಕಾ ಕಿಶೋರಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಪಂ ಮಾಜಿ ಉಪಾಧ್ಯಕ್ಷ ದೀಪಕ ಸಲಗರ್, ಸಂಸ್ಥಾಪಕ ಎಸ್.ಎಂ.ಭಕ್ತ ಕುಂಬಾರ ಹಾಗೂ ಮಹಾದೇವ ಮಾಲಿಪಾಟೀಲ್ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಮಾಲಾ ಬಿ.ನಾರಾಯಣರಾವ, ಗ್ರಾಪಂ ಅಧ್ಯಕ್ಷ ದತ್ತು ಚಿಟ್ಟಂಪಲ್ಲೆ, ಜಿಪಂ ಮಾಜಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಶಿವಕುಮಾರ ಶೆಟಕಾರ, ಅಂಜುರಬಾಯಿ ನಾಗೀನಕೇರೆ, ಶ್ರೀನಿವಾಸ ಕಾಂಬಳೆ, ಮಹಾಪುರಿ ಸೂರ್ಯವಂಶಿ, ಸಂತೋಷ ಕೂಡಂಬಲ್ಲೆ, ಸಂತೋಷ ಜವಳೆ, ಚನವೀರ ಖಸ್ಗೆ, ಗುರು ಮುಗಳಿ ಇತರರಿದ್ದರು. ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net