ಶ್ರದ್ಧೆಯಿಂದ ಓದಿದರೆ ಶಿಕ್ಷಣದಲ್ಲಿ ಸಾಧನೆ

sri sanmana
ಶೃಂಗೇರಿ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಜೆಸಿಐ ಪೂರ್ವಾಧ್ಯಕ್ಷ ಉಳುವೆ ಗಿರೀಶ್ ಅವರನ್ನು ಗೌರವಿಸಲಾಯಿತು. ಸಂತೋಷ್‌ಕುಮಾರ್, ಪ್ರಿಯದರ್ಶಿನಿ ಹೆಗಡೆ, ಮನೋಜ್ ಇತರರಿದ್ದರು.
Published on

ಶೃಂಗೇರಿ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾಗಿರುವ ಎಸ್‌ಎಸ್‌ಎಲ್‌ಸಿಯಲ್ಲಿ ಶ್ರದ್ಧೆಯಿಂದ ಓದಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದು ಜೆಸಿಐ ಪೂರ್ವಾಧ್ಯಕ್ಷ ಉಳುವೆ ಗಿರೀಶ್ ಹೇಳಿದರು.

ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮಹತ್ವದ ಬಗ್ಗೆ ಮಾತನಾಡಿ, ಸಾಧಕರು ಮಾಡಿದ ಸಾಧನೆ ಒಂದು ದಿನದಲ್ಲಿ ಗಳಿಸಿರುವುದಲ್ಲ. ಶ್ರದ್ಧೆ, ಪ್ರಾಮಾಣಿಕತೆ, ನಿರಂತರ ಶ್ರಮದಿಂದ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಕನಸನ್ನು ನನಸಾಗಿಸಲು ಪಣ ತೊಡಬೇಕು. ಪ್ರಾಥಮಿಕ ಹಂತದ ಶಿಕ್ಷಣದಿಂದ ಆರಂಭವಾಗುವ ಶೈಕ್ಷಣಿಕ ಪದ್ಧತಿಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟ. ಇಲ್ಲಿ ನೀವು ಸಾಧನೆ ಮಾಡಿದರೆ ಭವಿಷ್ಯ ಉಜ್ವಲವಾಗುವುದು ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ ಮಾತನಾಡಿ, ಶ್ರದ್ಧೆ, ಗುರು ಭಕ್ತಿ ಇದ್ದಾಗ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಯಾವುದೇ ವಿಷಯವನ್ನು ಮನನ ಮಾಡಿಕೊಳ್ಳಬೇಕಾದರೆ ಬರೆದಿಟ್ಟುಕೊಳ್ಳವ ಅಭ್ಯಾಸ ಮಾಡಬೇಕು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಬೆಳಗ್ಗೆ ಬೇಗ ಎದ್ದು ಓದುವುದು, ಸಾಧ್ಯವಾದಷ್ಟು ಬರೆದು ಕಲಿಯುವುದು ಹೆಚ್ಚು ಅಂಕ ಗಳಿಕೆಗೆ ಸಹಾಯಕವಾಗುತ್ತದೆ ಎಂದರು.

ಶಾಲಾ ಮುಖ್ಯಶಿಕ್ಷಕ ಸಂತೋಷ್‌ಕುಮಾರ್, ಕೆ.ಎಲ್.ಗೋಪಾಲಕಷ್ಣ, ರೋಟರಿ ಕ್ಲಬ್‌ನ ಸೌಮ್ಯಾಕುಮಾರ್, ಸುರೇಶ್ ಹೆಗ್ಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net