ಶ್ರದ್ಧೆಯಿಂದ ಓದಿದರೆ ಗುರಿ ತಲುಪಬಹುದು:ಡಾ.ವಿಜಯ ಅಂಗಡಿ

ಶ್ರದ್ಧೆಯಿಂದ ಓದಿದರೆ ಗುರಿ ತಲುಪಬಹುದು:ಡಾ.ವಿಜಯ ಅಂಗಡಿ
Published on

ಹಾಸನ: ಶ್ರದ್ಧೆಯಿಂದ ಓದಿ ಜೀವನದಲ್ಲಿ ಬರುವ ಎಲ್ಲಾ ಅಡಚಣೆಗಳನ್ನು ಧೈರ್ಯದಿಂದ ಎದುರಿಸಿದರೆ ಮಾತ್ರ ಯಶಸ್ವಿಯಾಗಿ ಗುರಿ ತಲುಪಬಹುದು ಎಂದು ಹಾಸನದ ಆಕಾಶವಾಣಿಯ ಕಾರ್ಯ ನಿರ್ವಾಹಕ ಡಾ.ವಿಜಯ ಅಂಗಡಿ ಸಲಹೆ ನೀಡಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ೌಂಡೇಶನ್‌ನ ಎರಡನೆಯ ಬ್ಯಾಚಿನ ಯಶಸ್ವಿ ಬ್ಯಾಂಕ್ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಓದಿ ಜೀವನದಲ್ಲಿ ಬರುವ ಎಲ್ಲಾ ಸಮಸ್ಯಗಳನ್ನ ಧೈರ್ಯದಿಂದ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಖೆಯ ನಿರ್ದೇಶಕ ಬಿ.ಬೋರೇಗೌಡ, ಮಾತನಾಡಿ, ಕೃಷಿಕ್ ಸರ್ವೋದಯ ೌಂಡೇಶನ್‌ನ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೈಗೆಟುಕುವ ರಿಯಾಯಿತಿ ದರದಲ್ಲಿ ಸ್ಪರ್ಧ್ಮಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪದವೀಧರ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದಿನ ಬ್ಯಾಚಿನ ಬ್ಯಾಂಕ್ ತರಬೇತಿ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳ ಇದೇ ತಿಂಗಳು 25ರೊಳಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾಖೆಯ ನಿರ್ದೇಶಕರಾದ ಹೆಚ್.ಜಿ. ಸತ್ಯಾನಾರಾಯಣ, ಬಿ.ಕೆ. ಮಂಜುನಾಥ್ ಹಾಗೂ ಕಛೇರಿ ಸಂಯೋಜಕಾರ ಬಿ. ಸಿದ್ದೇಗೌಡ, ಸುಬ್ರಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net