ಶ್ರದ್ಧೆ, ಭಕ್ತಿಯಿಂದ ಮೊಹರಂ ಆಚರಣೆ

0304
Published on

ಬೆಳಗಾವಿ: ನಗರವೂ ಸೇರಿ ಜಿಲ್ಲಾದ್ಯಂತ ಮಂಗಳವಾರ ಶ್ರದ್ಧೆ&ಭಕ್ತಿಯಿಂದ ಮೊಹರಂ ಆಚರಿಸಲಾಯಿತು. ಬೆಳಗಾವಿಯಲ್ಲಿ ಗಾಂಧಿನಗರ, ಖಂಜರ ಗಲ್ಲಿ, ದರ್ಬಾರ್​ ಗಲ್ಲಿ, ಆಜಮ್​ ನಗರ ಹಾಗೂ ಶಿವಾಜಿ ನಗರ ಸೇರಿ ಮತ್ತಿತರ ಬಡಾವಣೆಗಳಲ್ಲಿ 5 ದಿನಗಳ ಕಾಲ ಪಂಜಾ ಪ್ರತಿಷ್ಠಾಪಿಸಲಾಗಿತ್ತು.

ಮಂಗಳವಾರ ಮೊಹರಂ ಕಡೆಯ ದಿನವಾಗಿದ್ದರಿಂದ ನಗರದ ಹಲವೆಡೆ ಪಂಜಾಗಳು ಹಾಗೂ ಅಲಂಕೃತ ಡೋಲಿಗಳ ಮೆರವಣಿಗೆ ಜರುಗಿತು. ಹಿಂದು&ಮುಸ್ಲಿಂ ಧರ್ಮಿಯರೆಲ್ಲರೂ ಭಾವೈಕ್ಯತೆಯಿಂದ ಧಾರ್ಮಿಕ ಕೈಂಕರ್ಯ ಕೈಗೊಂಡು ಭಾವೈಕ್ಯತೆ ಮೆರೆದರು.

ಸವದತ್ತಿ ತಾಲೂಕಿನ ಹರ್ಲಾಪುರ, ಹಿರೇಬೂದನೂರ, ನಿಪ್ಪಾಣಿ ತಾಲೂಕಿನ ಬೋರಗಾಂವಾಡಿ ಮೂರು ಗ್ರಾಮಗಳಲ್ಲಿ ಒಬ್ಬರೂ ಮುಸ್ಲಿಮರಿಲ್ಲದಿದ್ದರೂ ಮೊಹರಂ ಆಚರಿಸಲಾಯಿತು. ಇಷ್ಠಾರ್ಥ ಈಡೇರಿಸಿದ್ದರಿಂದ ಕೆಲ ಭಕ್ತರು ಬೆಳ್ಳಿ ಕುದುರೆ ಸೇರಿ ಹಲವು ನೈವೇದ್ಯ ಸಮರ್ಪಿಸಿದರು. ಧರ್ಮಗುರುಗಳು ಮೊಹರಂ ಆಚರಣೆ ಹಾಗೂ ಹಿನ್ನೆಲೆಯನ್ನು ತಿಳಿಸಿದರು. ಕೆಲವೆಡೆ ಹಿಂದು ಸಂಟನೆಗಳಿಂದ ತಂಪು ಪಾನೀಯ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net