ಶ್ರದ್ಧಾಭಕ್ತಿಯಿಂದ ಜರುಗಿದ ಕಲ್ಯಾಣವೃಷ್ಟಿ ಮಹಾಭಿಯಾನದ ಸ್ತೋತ್ರ ಸಮರ್ಪಣೆ

ctd--000009
Published on

ಚಿತ್ರದುರ್ಗ:ಜಿಲ್ಲಾ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದಿಂದ ಶ್ರಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವ ಅಂಗವಾಗಿ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಲ್ಯಾಣ ವೃಷ್ಟಿ ಮಹಾಭಿಯಾನ-ಸ್ತೋತ್ರ ಸಮ ರ್ಪಣೆ ಕಾರ‌್ಯಕ್ರಮ ನಡೆಯಿತು.

ಬೆಲಗೂರು ಶ್ರೀ ಕ್ಷೇತ್ರದ ಪೀಠಾಧಿಪತಿ ಶ್ರೀ ಮಾರುತಿ ಶರ್ಮ ಗುರುಗಳು ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸ್ತೋತ್ರಗಳನ್ನು ಅಭ್ಯಾಸ ಮಾಡಿದ್ದ ಮಾತೆಯರು ಸಾಮೂಹಿಕವಾಗಿ ಸ್ತೋತ್ರ ಪಠಿಸಿದರು. ಶೃಂಗೇರಿ ಶಾರದ ಪೀಠದ ಪ್ರತಿನಿಧಿ ಉಮೇಶ್ ಹರಿಹರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿದರು. ಮಾರುತಿ ಮೋಹನ್ ನಿರೂಪಿಸಿದರು.

ಲೋಕ ಕಲ್ಯಾಣಾರ್ಥ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಅಂಗವಾಗಿ ಅನೇಕ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಶ್ರೀ ಶಾಂಕರ ಸ್ತೋತ್ರ ಪಠಣವೂ ವಿಶೇಷವಾಗಿದೆ. ಶಂಕರ ಚಾರ್ಯರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ, ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರಗಳ ಅಭಿಯಾನ ರಾಜ್ಯಾದ್ಯಂತ ನಡೆಯುತ್ತಿದೆ.

ಅಭಿಯಾನದ ಜಿಲ್ಲಾ ಸಂಚಾಲಕಿ ಉಷಾ ಗುರುದತ್ತ, ಜ್ಯೋತಿ ಗಿರೀಶ್, ವೆಂಕಟೇಶ್‌ದೀಕ್ಷಿತ್, ಶೇಷಗಿರಿ, ಅನಂತ್‌ರಾಮ್ ಗೌತಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net