ಶ್ರದ್ಧಾಭಕ್ತಿಯ ವರಮಹಾಲಕ್ಷ್ಮೀ ಹಬ್ಬ

8ss2
Published on

ಶನಿವಾರಸಂತೆ: ವರಮಹಾಲಕ್ಷ್ಮೀ ಹಬ್ಬವನ್ನು ಶನಿವಾರಸಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮುಂಜಾನೆಯಿಂದಲೇ ಮಹಿಳೆಯರು ವರ ಮಹಾಲಲಕ್ಷ್ಮೀ ದೇವಿಯ ಪೂಜೆಗೆ ಸಿದ್ಧತೆ ನಡೆಸಿದರು. ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ದೇವರ ಮನೆಗಳನ್ನು ಬಾಳೆಕಂದು, ಕಬ್ಬಿನ ಜೊಲ್ಲೆ, ಹೂವುಗಳಿಂದ ಅಲಂಕರಿಸಿದರು. ವರಮಹಾಲಕ್ಷ್ಮೀ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಮಂಟಪದೊಳಗೆ ಕಳಸವನ್ನಿಟ್ಟು ಹಣತೆ ಹಚ್ಚಿ ಹಣ್ಣು, ಕಾಯಿ, ಫಲ ತಾಂಬೂಲ, ದೇವಿಗೆ ಪ್ರಿಯವಾದ ತಿನಿಸುಗಳು, ಚಿನ್ನಾಭರಣ, ನಗದು ಇಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಅಕ್ಕಪಕ್ಕದ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net