ಶ್ರದ್ಧಾಭಕ್ತಿಯ ಈಶ್ವರ-ಭಗವತಿ ಉತ್ಸವ

08 Vtp 2 Ishwara Temple
Published on

ವಿರಾಜಪೇಟೆ: ಬೈರನಾಡು ದೇವಣಗೇರಿ ಶ್ರೀ ಈಶ್ವರ-ಭಗವತಿ ದೇವರ ಉತ್ಸವವು ಏ.3ರಿಂದ 8ರವರೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಏ.3ರಂದು ಬೆಳಗ್ಗೆ 9 ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡಿತು. ತೋರಣ ಮೂಹೂರ್ತ, ಮೃತ್ಯುಂಜಯ ಹೊಮ, ಕಳಶಾಭಿಷೇಕ ನಡೆಯಿತು. ಸಂಜೆ 7 ಗಂಟೆಗೆ ತಕ್ಕರ ಮನೆಯಿಂದಸ ಭಂಡಾರ, ಕೊಡಿಮರ ಪೂಜೆ, ದೇವರ ಕಟ್ಟು ಬೀಳುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಪ್ರತಿದಿನ ಪ್ರಾತ: ಕಾಲ ದೇವರ ಬಲಿ, ನಿತ್ಯಪೂಜೆ, ಕಲಾಭಿಷೇಕ, ಕೊಡಿಮರ ಪೂಜೆ, ಸಂಜೆ 6.30 ಗಂಟೆಗೆ ತಂತ್ರಕೊಡೆ ದೇವರ ಬಲಿ, ದೀಪಾರಾಧನೆ, ದೇವರ ನೃತ್ಯ, ಮಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಏಪ್ರಿಲ್ 6ರಂದು ನಿತ್ಯಪೂಜೆ ಹಾಗೂ ಇತರ ಪೂಜೆಗಳು ಸೇರಿದಂತೆ ದೇವರ ಬನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯದಲ್ಲಿ ವಸಂತಪೂಜೆ ನಡೆಯಿತು.

ಏ.8ರಂದು ಸಂಜೆ 4.30 ಗಂಟೆಗೆ ದೇವರ ಅವಭೃತ ಸ್ನಾನ, ಅಲಂಕಾರ ಪೂಜೆ, ದೇವರ ನೃತ್ಯ ನಡೆಯಿತು. ಪ್ರತಿದಿನ ದೇವಾಲಯದಲ್ಲಿ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ ನಡೆಯಿತು. ಪ್ರಧಾನ ಅರ್ಚಕ ಪ್ರಕಾಶ್ ನೇತೃತ್ವದಲ್ಲಿ ಪೂಜಾ ಕೈಕಂರ್ಯಗಳು ನಡೆಯಿತು. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ದೇವರ ದರ್ಶನ ಪಡೆದುಕೊಂಡರು. ದೇವಾಲಯ ಸಮಿತಿ ಅಧ್ಯಕ್ಷ ಮುಕ್ಕಾಟಿರ ರಾಜಪ್ಪ ಪೂವಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net