ಶ್ರದ್ಧಾ, ಭಕ್ತಿಯೊಂದಿಗೆ ಜರುಗಿದ ಬಂದೇನವಾಜ್​ ಸಂದಲ್​

1405KLB03
Published on

ಕಲಬುರಗಿ: ಇಲ್ಲಿನ ಐತಿಹಾಸಿಕ ಹಜರತ್​ ಖ್ವಾಜಾ ಬಂದಾನವಾಜ್​ ರ‍್ಗಾದ ಉರುಸ್​ ಆರಂಭಗೊಂಡಿದ್ದು, ಎರಡನೇ ದಿನವಾದ ಬುಧವಾರ ಸಂಜೆ ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಸಂದಲ್​ (ಗಂಧ) ಮೆರವಣಿಗೆ ಜರುಗಿತು. ರಾಜ್ಯ ಮಾತ್ರವಲ್ಲ, ದೇಶದ ವಿವಿಧೆಡೆಯಿಂದ ಹರಿದುಬಂದ ಭಕ್ತಸಾಗರ ಸಾಕ್ಷಿಯಾಯಿತು.

ಮಧ್ಯಾಹ್ನದಿಂದಲೇ ಭಕ್ತರು ಗುಲ್ಶನ್​(ಪಬ್ಲಿಕ್​) ಗರ‍್ಡನ್​ನಲ್ಲಿ ಜಮಾಯಿಸಿದ್ದರು. ಬಳಿಕ ಖ್ಯಾತನಾಮರು ಕವ್ವಾಲಿ ಪ್ರಸ್ತುತಪಡಿಸಿದರು. ಅದಕ್ಕೆ ಸಜ್ಜಾದರು ಮತ್ತು ಗಣ್ಯರು ಧ್ವನಿಗೂಡಿಸಿದರು. ಮೆಹ್ಫಿಲ್​-ಎ&-ಸಮಾ (ಆಧ್ಯಾತ್ಮಿಕ ಸಂಗೀತ ಸಮಾರಂಭ) ನಡೆಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕವ್ವಾಲಿ ಹಾಡುಗಾರರು ಧರ‍್ಮಿಕ ಕಲಾಮ್​ಗಳನ್ನು ಹಾಡಿದರು.

ನಂತರ ಸಂದೇಶ ನೀಡಿದ ರ‍್ಗಾ ಮುಖ್ಯಸ್ಥ ಸಜ್ಜಾದೆ ನಶೀನ್​ ಸೈಯದ್​ ಮೊಹ್ಮದ್​ ಅಲಿ ಅಲ್​ ಹುಸೇನಿ ತಲೆಯ ಮೇಲೆ ಸಂದಲ್​ ಹೊತ್ತು ಸಾಂಪ್ರದಾಯಿಕ ವಿಧಿ&ವಿಧಾನ ನೆರವೇರಿಸಿ ಚಾದಾರ ಸುತ್ತು ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು. ಮೌಲಾನಾ ಅಬ್ದುಲ್​ ರಶೀದ್​ ಸಾಹೇಬ್​ ವಿಶೇಷ ದುವಾ ಮಾಡಿದರು. ಮೆರವಣಿಗೆಯೂದ್ದಕ್ಕೂ ಧರ‍್ಮಿಕ ಗೀತೆಗಳನ್ನು ಹಾಡುತ್ತ ಹೆಜ್ಜೆ ಹಾಕಲಾಯಿತು.

ಸರ‍್ವಜನಿಕ ಉದ್ಯಾನದಿಂದ ಹೊರಟ ಸಂದಲ್​ ಮೆರವಣಿಗೆ ಜಗತ್​ ವೃತ್ತದ ಮೂಲಕ ಸೂಪರ್​ ಮರ‍್ಕೆಟ್​ಗೆ ತಲುಪಿತು. ಮಸೀದಿಯಲ್ಲಿ ಮಗರಿಬ್​ ಮತ್ತು ಇಶಾ ನಮಾಜ್​ ಸಲ್ಲಿಸಿದ ಬಳಿಕ ಮತ್ತೆ ಮೆರವಣಿಗೆ ಮುಂದುವರಿಯಿತು. ಗಣೇಶ ಮಂದಿರ, ಬಹಮನಿ ರ‍್ಕಲ್​, ನ್ಯಾಷನಲ್​ ಚೌಕ್​ ಮರ‍್ಗವಾಗಿ ರಾತ್ರಿ ೧೦.೩೦ರ ಸುಮಾರಿಗೆ ಕೆಬಿಎನ್​ ರ‍್ಗಾ ತಲುಪಿತು. ಧರ‍್ಮಿಕ ಕರ‍್ಯಕ್ರಮಗಳ ಬಳಿಕ ಶಾಸೊಕ್ತವಾಗಿ ತಡರಾತ್ರಿ ೧ರ ಸುಮಾರಿಗೆ ದೇವರಿಗೆ ಸಜ್ಜಾದೆ ಮರ‍್ಗರ‍್ಶನದಲ್ಲಿ ಗಂಧ ಲೇಪನ ಮಾಡಲಾಯಿತು.

ಬಂದೇನವಾಜ್​ ಕುಟುಂಬದ ಸದಸ್ಯರೊಂದಿಗೆ, ಸಜ್ಜಾದಾಗಾನ್​, ಮಶಾಯಿಖ್​, ಉಲೆಮಾಗಳು, ಡಾ.ಸೈಯದ್​ ಮುಸ್ತಾ ಅಲ್​ ಹುಸೇನಿ, ಸೈಯದ್​ ಯೂಸ್​ೂ ಹುಸೇನಿ, ಸೈಯದ್​ ಶಹಾ ತಾಖಿಲ್ಹಾ ಹುಸೇನಿ, ಶಹಾ ರಹಿಮುಲ್ಹಾ ಹುಸೇನಿ, ಅಹ್ಮದ್​ ಹುಸೇನಿ, ಮರ‍್ತಾಜಾ ಹುಸೇನಿ, ಆಕ್ಯೂಬ್​ ಹುಸೇನಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net