

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಅವರ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪಿಸುವುದರೊಂದಿಗೆ ಶ್ರೀ ಮುರುಘಾ ಮಠದ ರಾಜಾಂಗಣ ಸದರುಕಟ್ಟೆಯಲ್ಲಿ ಶುಕ್ರವಾರ ಶೂನ್ಯ ಪೀಠಾರೋಹಣ ಕಾರ್ಯಕ್ರಮ ಬಸವಣ್ಣ, ಅಲ್ಲಮ ಪ್ರಭುದೇವರ ಭಾವಚಿತ್ರ, ಪ್ರಾಚೀನ ಹಸ್ತಪ್ರತಿಗಳ ಹೂವಿನ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಕೋಲಾಟ, ಡೊಳ್ಳು, ವೀರಗಾಸೆ, ಭಜನೆ, ಕಹಳೆ ಮುಂತಾದ ಜನಪದ ಕಲಾಮೇಳಗಳು ಪೀಠಾರೋಹಣ ಹಾಗೂ ಮೆರವಣಿಗೆಗೆ ಮೆರುಗು ತಂದವು.
ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಡಾ. ಬಸವಪ್ರಭು ಸ್ವಾಮೀಜಿ,ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಮೋಕ್ಷಪತಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಡಾ.ಬಸವ ರಮಾನಂದ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ವೇಮಾನನಂದ ಸ್ವಾಮೀಜಿ ಹಾಗೂ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀಭೃಂಗೇಶ್ವರ ಸ್ವಾಮೀಜಿ, ಶ್ರೀ ಚನ್ನಬಸವ ದೇವರು, ಶರಣೆ ನಂದಾ ತಾಯಿ ಹಾಗೂ ನಾನಾ ಮಠಾಧೀಶರು, ಹರಗುರು ಚರಮೂರ್ತಿಗಳು, ಪಟೇಲ್‌ಶಿವಕುಮಾರ್, ಮಲ್ಲಿಕಾರ್ಜುನ್, ಕೆಇಬಿ ಷಣ್ಮುಖಪ್ಪ, ಎಸ್.ವಿ. ನಾಗರಾಜಪ್ಪ, ಕೆ.ಎಂ. ವೀರೇಶ್ ಮತ್ತಿತರ ಪ್ರಮುಖರು ಇದ್ದರು.
ಅದ್ಧೂರಿಯಾಗಿ ಜರುಗಿದ ಪೀಠಾರೋಹಣ ಹಾಗೂ ಮೆರವಣಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಜಂಗೀಕುಸ್ತಿ: ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ಶ್ರೀ ಮಠದ ಆವರಣದಲ್ಲಿ ಶುಕ್ರವಾರ ಶ್ರೀ ಜಯದೇವ ಜಂಗಿಕುಸ್ತಿ ಏರ್ಪಡಿಸಲಾಗಿತ್ತು. ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೊಲ್ಲಾಪುರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯ, ಹೊರರಾಜ್ಯಗಳಿಂದ ನೂರಾರು ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಕುಸ್ತಿ ಪಟುಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕುಸ್ತಿ ಅತ್ಯಂತ ಹೆಸರುವಾಸಿಯಾದ ಗ್ರಾಮೀಣ ಕ್ರೀಡೆಯಾಗಿದೆ. ಈ ಪಂದ್ಯಾವಳಿಯಲ್ಲಿ ಪುರುಷ ಹಾಗೂ ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದಾರೆ ಎಂದರು.
ಸಮ್ಮುಖ ವಹಿಸಿದ್ದ ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಜಯದೇವ ಜಂಗೀಕುಸ್ತಿ ಪಂದ್ಯಾವಳಿಗೆ 50 ವರ್ಷಗಳ ಇತಿಹಾಸವಿದೆ. ಶ್ರೀ ಮಠ ಈ ಪಂದ್ಯಾವಳಿಗೆ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು. ತೀರ್ಪುಗಾರರಾಗಿ ಪೈಲ್ವಾನ್‌ತಿಪ್ಪೇಸ್ವಾಮಿ, ರಫೀಜ್ ಹೋಳಿ, ಮರಡಿ, ಅಮೃತಣ್ಣ ಮೈಸೂರು, ಭರತ್, ಮೂರ್ತಿ ಆಗಮಿಸಿದ್ದರು.
ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಸುರೇಶ್‌ಬಾಬು, ಗಂಜಿಗಟ್ಟಿ ಶಿವಣ್ಣ, ವಕೀಲ ಫಾತ್ಯರಾಜನ್, ವೈದ್ಯನಾಥ್ ಇದ್ದರು. ಮುರುಗೇಶ್ ನಿರೂಪಿಸಿದರು.
ಸಹಜ ಶಿವಯೋಗ: ವಿಚಾರರಹಿತ ಅರಿವಿನ ಸ್ಥಿತಿಯನ್ನು ಸ್ಥಾಪಿಸುವುದೇ ಸಹಜ ಶಿವಯೋಗ ಎಂದು ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಆಯೋಜಿಸಿದ್ದ ಸಹಜ ಶಿವಯೋಗದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಈ ಸ್ಥಿತಿಯಲ್ಲಿ ಆಳವಾದ ಶಾಂತಿ ಮತ್ತು ಆನಂದವನ್ನು ಅನುಭವಿಸಬಹುದಾಗಿದೆ ಎಂದರು.
ಡಾ. ಬಸವಕುಮಾರ ಸ್ವಾಮೀಜಿ, ತಂಗನಹಳ್ಳಿ ಅನ್ನಪೂರ್ಣೇಶ್ವರಿ ಮಠದ ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ, ಶರಣೆ ವಚನ ಸಂಸ್ಕೃತಿ, ಶರಣೆ ನಂದಾತಾಯಿ, ಶ್ರೀ ಬಸವ ಚೇತನ ಸ್ವಾಮೀಜಿ, ಮಂಡ್ಯ ಕದಳಿ ಮಹಾಮಹಿಳಾ ವೇದಿಕೆಯ ಪದ್ಮಾ ಸೋಮಶೇಖರ್, ಕಟ್ಟಿಹಳ್ಳಿ ಬಸವಕೇಂದ್ರದ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಮೂಗನಹಳ್ಳಿ ಗ್ರಾಪಂ ಸದಸ್ಯ ಹನುಮಂತಯ್ಯ, ಕಿರುಗಾವಲು ಬಸವಕೇಂದ್ರದ ಕೆ.ಆರ್. ನಾಗರಾಜ್, ಅನಿಲ್‌ಕುಮಾರ್, ಹರ ಗುರು ಚರಮೂರ್ತಿಗಳು ಇದ್ದರು. ಜಮರಾ ಕಲಾವಿದರು ಪ್ರಾರ್ಥಿಸಿದರು. ಸಿ.ಎಂ. ಚಂದ್ರಪ್ಪ ಸ್ವಾಗತಿಸಿ, ಟಿ.ಪಿ ಜ್ಞಾನಮೂರ್ತಿ ನಿರೂಪಿಸಿದರು.