ಶ್ರದ್ದೆಯಿಂದ ಓದಿದರೆ ಸಾಧನೆ ಕಷ್ಟವಲ್ಲ

11ydg01
Published on

ಯಾದಗಿರಿ: ಜಾಗತಿಕರಣದ ಇಂದಿನ ದಿನಗಳಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಸ್ಪಧರ್ೆ ಇರುವಂತೆ, ಜೀವನದಲ್ಲಿ ಮುಂದೆ ಬರಲು ಸಹ ಅವಕಾಶಗಳಿವೆ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದರು.

ಸೋಮವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ ಮಿಷನ್ ಹಾಗೂ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾಥರ್ಿಗಳ ಜತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರಿಗೂ ಒಂದೇ ರೀತಿ ಬುದ್ಧಿಮತ್ತೆ ಇರುತ್ತದೆ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಮಯ ನಮಗಾಗಿ ಕಾಯುವುದಿಲ್ಲ. ಅದನ್ನು ಸದ್ಬಳಕೆ ಮಾಡಿಕೊಂಡರೆ, ಜೀವನದಲ್ಲಿ ನಾವಿಟ್ಟುಕೊಂಡ ಗುರು ತಲುಪಲು ಸಾಧ್ಯ ಎಂದು ಹಲವು ಉದಾಹರಣೆಗಳ ಸಹಿತ ಬಿಡಿಸಿಟ್ಟರು.

ಕಷ್ಟಪಟ್ಟು ಶ್ರದ್ದೆಯಿಂದ ಓದಿದರೆ ಸಾಧನೆ ಕಷ್ಟವೇ ಅಲ್ಲ. ಜೀವನದಲ್ಲಿನ ಕನಸು ನನಸಾಗಬೇಕಾದರೆ ಸತತ ಪರಿಶ್ರಮ ಮತ್ತು ಶ್ರದ್ದೆಯಿಂದ ಸ್ಪಧರ್ಾತ್ಮಕ ಪರೀಕ್ಷೆ ಎದುರಿಸಬೇಕು. ಮನೆಯಲ್ಲಿ ಬಡತನವಿದೆ ಎಂದು ಯಾರು ನಿರಾಶೆಯಾಗಬಾರದು. ಸಾಸುವ ಹಂಬಲವಿದ್ದರೆ ಯಾವುದೂ ಅಸಾಧ್ಯವಲ್ಲ. ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧನೆ ಮಾಡಬಹುದಾಗಿದೆ. ಯಾವುದೇ ಗುರಿ ತಪ್ಪಲ್ಲ. ಆದರೆ ಗುರಿ ದೊಡ್ಡದಾಗಿರಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಕನಸು ಕಾಣಬೇಕಾದರೆ ಅದಕ್ಕೆ ಯಾವುದೇ ರೀತಿಯಾಗಿ ಬಾರ್ಡರ್ (ಸೀಮೆ) ಮಿತಿ ಇರುವುದಿಲ್ಲ ಎಂದರು.

ಯುಪಿಎಸ್ಸಿ ಪರೀಕ್ಷೆಯನ್ನು ಕೇವಲ ಶ್ರೀಮಂತರು ಮಾತ್ರ ಬರೆಯುತ್ತಾರೆ ಎಂಬ ಮಾನಸಿಕ ಕಲ್ಪನೆಯಿಂದ ಎಲ್ಲರೂ ಹೊರಗೆ ಬರಬೇಕಾಗಿದೆ. ನಾನು ಸಹ ಹಳ್ಳಿಯಿಂದ ಬಂದಿದ್ದೇನೆ. ಅದರಲ್ಲಿಯೂ ತಾಂಡದಿಂದ ಶಾಲೆಗೆ ನಡೆದುಕೊಂಡು ಹೋಗಿ ಶಿಕ್ಷಣ ಪಡೆದಿದ್ದೇನೆ. ಆದರೆ, ನನಗೆ ಸಾಧನೆ ಮಾಡಲೇಬೇಕು ಎಂಬ ಹಠ ಇತ್ತು. ಎಷ್ಟೇ ಕಠಿಣ ಪರೀಕ್ಷೆ ಇದ್ದರೂ ಅದನ್ನೂ ಎದುರಿಸುವೆ ಎಂಬ ಆತ್ಮವಿಶ್ವಾಸದೊಂದಿಗೆ ಸಿದ್ಧತೆ ನಡೆಸಿದೆ ಎಂದು ತಮ್ಮ ಬಾಲ್ಯದ ನೆನೆಪನ್ನು ವಿದ್ಯಾಥರ್ಿಗಳ ಮುಂದಿಟ್ಟರು.

ಎಲ್ಲರೂ ಸಮಯ ಪಾಲನೆಯಿಂದ ವಿದ್ಯಾಭ್ಯಾಸಮಾಡಿ, ಈ ಕೋಚಿಂಗ್ ಸೌಲಭ್ಯವನ್ನು ಪಡೆದು ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಿ. ಜಿಲ್ಲೆಯಿಂದ ಉನ್ನತ ಅಕಾರಿಗಳಾಗಿ ನೀವು ಹೊರಹೊಮ್ಮುತ್ತೀರಿ ಎಂಬ ವಿಶ್ವಾಸನ ನನಗಿದೆ. ಅಲ್ಲದೆ, ಜಿಲ್ಲಾಡಳಿತ ಸಹ ಅದನ್ನೇ ನಿರೀಕ್ಷೆ ಮಾಡುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net