ಶೌರ್ಯ ಸ್ವಯಂ ಸೇವಕರಿಂದ ಶ್ರಮದಾನ

16.npk-1
ನಾಪೋಕ್ಲುವಿನ ಇಂದಿರಾ ನಗರದಲ್ಲಿರುವ ಸಮುದಾಯ ಭವನ ಆವರಣವನ್ನು ಶೌರ್ಯ ತಂಡದ ಸ್ವಯಂ ಸೇವಕರು ಸ್ವಚ್ಛಗೊಳಿಸಿದರು.
Published on

ನಾಪೋಕ್ಲು: ಸಮೀಪದ ಇಂದಿರಾ ನಗರದಲ್ಲಿರುವ ಸಮುದಾಯ ಭವನದ ಒಳ ಮತ್ತು ಹೊರ ಆವರಣವನ್ನು ಶೌರ್ಯ ಸ್ವಯಂ ಸೇವಕರು ಭಾನುವಾರ ಸ್ವಚ್ಛಗೊಳಿಸಿದರು.

ಭವನದ ಸುತ್ತಮುತ್ತ ಬೆಳೆದಿದ್ದ ಕಾಡು ಹಾಗೂ ಕಸವನ್ನು ಶ್ರಮದಾನ ಮೂಲಕ ತೆರವು ಮಾಡಿದರು. ಶೌರ್ಯ ತಂಡದ ಸದಸ್ಯರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಶೇಷ.

ಶಾಲೆ, ಅಂಗನವಾಡಿ, ಸಮುದಾಯ ಭವನಗಳ ಸ್ವಚ್ಛತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ವೃದ್ಧರಿಗೆ ನೆರವು ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಸಂಯೋಜಕಿ ಬಾಳೆಯಡ ದಿವ್ಯಾ ನೇತೃತ್ವದಲ್ಲಿ ಸದಸ್ಯರು ಹಮ್ಮಿಕೊಳ್ಳುತ್ತಿರುವುದು ಸಾರ್ವಜನಿಕರ ಪ್ರಸಂಸ್ಥೆಗೆ ಪಾತ್ರವಾಗಿದೆ .
ಸೇವಾ ಕಾರ್ಯದಲ್ಲಿ ಗೀತಾ, ಆಶಾ, ಶರವಣ, ದಮಯಂತಿ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net