

ನಾಪೋಕ್ಲು: ಇಲ್ಲಿನ ಶೌರ್ಯ ತಂಡದ ಸದಸ್ಯರು ಅಂಗನವಾಡಿ ಆವರಣದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವು ಮಡುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
ಅಂಗನವಾಡಿ ಸುತ್ತಮುತ್ತ ಗಿಡಗಂಟಿ ಬೆಳೆದು ಮಕ್ಕಳಿಗೆ ಓಡಾಡಲು ಸಮಸ್ಯೆ ಆಗುತ್ತಿತ್ತು. ಸ್ವಚ್ಛ ಮಾಡಿಕೊಡುವಂತೆ ಶಿಕ್ಷಕಿ ಜ್ಯೋತಿ ಕೋರಿದ್ದರು. ಹೀಗಾಗಿ ತಂಡದ ಸದಸ್ಯರು ಶ್ರಮದಾನ ಮಡುವ ಮೂಲಕ ಮಳೆ ನೀರು ಹರಿದು ಹೋಗುವಂತೆ ಅನುವು ಮಾಡಿಕೊಟ್ಟರು.
ಮೇಲ್ವಿಚಾರಕ ಸುನೀಲ್, ಸಂಯೋಜಕಿ ಬಾಳೆಯಡ ದಿವ್ಯಾ, ಶಂಕರ್, ದಿಲೀಶ್, ರವಿ, ಶರವಣ, ಉಮಾಲಕ್ಷ್ಮೀ, ಶ್ಯಾಮಲಾ, ಚಂದ್ರಕಲಾ, ಅಂಗನವಾಡಿ ಸಹಾಯಕಿ ಸರೋಜಾ ಇದ್ದರು.