ಶೌಚಗೃಹ ಬಳಕೆ ಜಾಗೃತಿ ಮೂಡಿಸಿ

22 HBD 1
ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ತಾಂಡದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆ ಮತ್ತು ಜನ ವಸತಿ ಸಭೆಯಲ್ಲಿ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ತಾಪಂ ಇಒ ದೀಪಿಕಾ ನಾಯ್ಕರ್ ಅರ್ಜಿ ವಿತರಿಸಿದರು. ಗ್ರಾಪಂ ಅಧ್ಯಕ್ಷ ಶಂಕರ ಪವರ, ಪಿಡಿಒ ಮಧು ದೇಶಪಾಂಡೆ, ದರ್ಶನ, ನಾಗೇಂದ್ರ ಮಡ್ರೆ ಇತರರಿದ್ದರು.
Published on

ಹುಮನಾಬಾದ್: ಗ್ರಾಮೀಣ ಪ್ರದೇಶದಲ್ಲಿ ಶೌಚಗೃಹ ಹೊಂದಿದ್ದರೂ ಸಹ ಬಳಕೆಯಾಗುತ್ತಿಲ್ಲವೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಹೇಳಿದರು.

ಕಲ್ಲೂರು ಗ್ರಾಮದ ತಾಂಡದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆ ಮತ್ತು ಜನ ವಸತಿ ಸಭೆಯಲ್ಲಿ ವೈಯಕ್ತಿಕ ಶೌಚಗೃಹ ನಿರ್ಮಿಮಿಸಿಕೊಳ್ಳಲು ಅರ್ಜಿ ವಿತರಿಸಿ ಮಾತನಾಡಿದ ಅವರು, ಗ್ರಾಪಂ ಮಟ್ಟದಲ್ಲಿ ಜನರಿಗೆ ಶೌಚಗೃಹ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಗ್ರಾಪಂನಿಂದ ವೈಯಕ್ತಿಕ ಶೌಚಗೃಹ ನಿರ್ಮಿಸಲು ಆರ್ಥಿಕ ನೆರವು ಅವಕಾಶವಿದ್ದು, ಗ್ರಾಮಸ್ಥರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.

ನರೇಗಾ ಯೋಜನೆಯ ೨೦೨೫-೨೦೨೬ನೇ ಸಾಲ್ಲಿನ ಆಯವ್ಯಯ ತಯಾರಿಸಲಾಗುತ್ತಿದ್ದು, ಗ್ರಾಮಸ್ಥರು ನರೇಗಾ ಯೋಜನೆಯಡಿ ತಮಗೆ ಬೇಕಾಗಿರುವ ಕಾಮಗಾರಿಗೆ ಹೆಸರು ನೋಂದಾಯಿಸಿಕೊಳ್ಳಿ ಎಂದು ಹೇಳಿದರು.

ಎಲ್ಲರಿಗೂ ಸಮರ್ಪಕವಾಗಿ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ತಾಲೂಕಿನ ೧೯ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಬೇಡಿಕೆ ಪೆಟ್ಟಿಗೆ ಸ್ಥಾಪನೆ ಮಾಡಲಾಗಿದೆ. ಅದೇ ರೀತಿ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಾಗುತ್ತೆದೆ ಎಂದರು.

ಗ್ರಾಪಂ ಅಧ್ಯಕ್ಷ ಶಂಕರ ಪವರ, ಸದಸ್ಯರಾದ ವೀರಭದ್ರ ಪಾಟೀಲ್, ಅಮೃತ ಮರಕುಂದ, ಸಂಜುಕುಮಾರ ಕಟ್ಟಿಮನಿ, ರೇವಣಸಿದ್ದ ಮರಕುಂದ, ಅನಿಲ, ಪಿಡಿಒ ಮಧು ದೇಶಪಾಂಡೆ, ಕಂಪ್ಯೂಟರ್ ಆಪರೇಟರ್ ಪ್ರಭು, ನಾಗೇಂದ್ರ ಮಡ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net