ಶೌಚಗೃಹ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಿ

1707 Chincholi 01
ರೋಡ್‌ಕಲ್ಲೂರು ಗ್ರಾಮದಲ್ಲಿ ಮಹಿಳಾ ಶೌಚಗೃಹ ನಿರ್ಮಿಸಬೇಕು, ಹಳ್ಳಿಗಳಿಗೆ ಸಮರ್ಪಕ ಬಸ್ ಓಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯ ತಾಲೂಕು ಪಂಚಾಯಿತಿ ಕಚೇರಿ ಎದುರು ಭಾರತ ಮುಕ್ತಿ ಮೋರ್ಚಾದಿಂದ ಪ್ಲಾಸ್ಟಿಕ್ ಲೋಟ (ಚಂಬು) ಹಿಡಿದು ಪ್ರತಿಭಟನೆ ನಡೆಸಲಾಯಿತು. ಮಾರುತಿ ಗಂಜಗೇರಾ, ಗೋಪಾಲ ಗಾರಂಪಳ್ಳಿ, ರೇಣುಕಾ ಕಲ್ಲೂರ, ಶಿವಬಾಯಿ, ಭಾಗ್ಯಶ್ರೀ ಇತರರಿದ್ದರು.
Published on

ಚಿಂಚೋಳಿ: ರೋಡ್‌ಕಲ್ಲೂರು ಗ್ರಾಮದಲ್ಲಿ ಶೌಚಗೃಹ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಭಾರತ ಮುಕ್ತಿ ಮೋರ್ಚಾದಿಂದ ಪ್ಲಾಸ್ಟಿಕ್ ಲೋಟ (ಚಂಬು) ಹಿಡಿದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೋರ್ಚಾದ ರಾಜ್ಯ ಸಂಚಾಲಕ ಮಾರುತಿ ಗಂಜಗೇರಾ ಮಾತನಾಡಿ, ರೋಡ್‌ಕಲ್ಲೂರು ಗ್ರಾಮದ ದಲಿತರ ಬಡಾವಣೆಯಲ್ಲಿ ನೆಲಸಮ ಮಾಡಿರುವ ಮಹಿಳಾ ಶೌಚಗೃಹ ಮರು ನಿರ್ಮಿಸಬೇಕು. ಕುಂಚಾವರಂ, ಚಿಮ್ಮನಚೋಡ, ಪಸ್ತಾಪುರ, ವೆಂಕಟಾಪುರ, ಗಡಿಕೇಶ್ವಾರ ಗ್ರಾಮಗಳ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು. ಕನಕಪುರ ಗ್ರಾಮ ಪಂಚಾಯಿತಿಯಲ್ಲಿ ೨೦೨೧/೨೨, ೨೦೨೨/೨೩ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರೋಡ್‌ಕಲ್ಲೂರಿನಲ್ಲಿ ದಲಿತರಿಗೆ ರುದ್ರಭೂಮಿ ಮಂಜೂರು ಮಾಡಬೇಕು. ಮಿರಿಯಾಣ, ಸೋಮನಿಂಗದಳ್ಳಿ, ಕೊಳ್ಳೂರ, ಐನೋಳ್ಳಿ, ಕುಪನೂರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಿಂದ ನಡೆಯುತ್ತಿದ್ದು, ಕಾಮಗಾರಿ ನಿಲ್ಲಿಸಿ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರಮುಖರಾದ ಗೋಪಾಲ ಗಾರಂಪಳ್ಳಿ, ಮೋಹನ ಐನಾಪುರ, ಸುಭಾಷ ತಾಡಪಳ್ಳಿ, ವಿಜಯ ತಾಡಪಳ್ಳಿ, ಶಾಮರಾವ ತಾಡಪಳ್ಳಿ, ಮೌನೇಶ ಗುರಂಪಳ್ಳಿ, ಗೆಮ್ಮು ರಾಠೋಡ್, ಮಾರುತಿ ಜಾಧವ್, ಸುಭಾಷ ಖಾನಪುರ, ಶ್ರೀಕಾಂತ ದೇಗಲಮಡಿ, ರೇಣುಕಾ ಕಲ್ಲೂರ, ಶಿವಬಾಯಿ ಕಲ್ಲೂರ, ಭಾಗ್ಯಶ್ರೀ ಕಲ್ಲೂರ, ರಾಮುಲಮ್ಮ ಕಲ್ಲೂರ, ಜಗಮ್ಮ ಕಲ್ಲೂರ, ಅಮೃತಮ್ಮ ಕಲ್ಲೂರ, ಸ್ವರೂಪ್ ಕಲ್ಲೂರ, ಸುನೀತಾ ಕಲ್ಲೂರ, ಶಿಲ್ಪಾ ಕಲ್ಲೂರ, ಪ್ರಿಯಾಂಕಾ, ಸುಮೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net