ಶೌಚಗೃಹ ಉದ್ಘಾಟಿಸಲು ಒತ್ತಾಯ

Vijayasene
Published on

ಚಿತ್ರದುರ್ಗ: ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಿಸಿರುವ ನೂತನ ಶೌಚಗೃಹ ಉದ್ಘಾಟಿಸದೆ, ಕಚೇರಿಗೆ ಬರುವ ಸಾರ್ವಜನಿಕರು ಉಪಯೋಗಿಸದಂತೆ ಬೀಗ ಹಾಕಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಕೂಡಲೇ ಶೌಚಗೃಹ ಉದ್ಘಾಟಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು. ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಸಿ.ಜಗದೀಶ್, ರತ್ನಮ್ಮ, ಗೋಪಿನಾಥ್, ಅವಿನಾಶ್, ರಾಜಣ್ಣ, ಪ್ರದೀಪ, ಹರೀಶ್, ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net