ಶೋಷಿತರಿಗೆ ವಿಮೋಚನೆ ನೀಡಿದ ಅಂಬೇಡ್ಕರ್

1304 KLB 05
Published on

ಕಲಬುರಗಿ: ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳನ್ನು ಸಂವಿಧಾನದ ಮೂಲಕ ನೀಡಿದ ಸಮಾನತೆ ಹರಿಕಾರ ಡಾ.ಬಿ.ಆರ್. ಅಂಬೇಡ್ಕರ್ ನಗರ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಹೇಳಿದರು.
ಶ್ರೀ ಸುಭಾಷ ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ನಿಂದ ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯುತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಮಾನತಾ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿ, ಶೋಷಣೆಗೊಳಗಾಗಿದ್ದ ಸಮುದಾಯಕ್ಕೆ ವಿಮೋಚನೆ ಹಾದಿ ತೋರಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಎಪಿಎAಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಕೋಟೆ ಮಾತನಾಡಿ, ಅಂಬೇಡ್ಕರï ಶತಮಾನದಿಂದ ವಂಚಿತ ಶ್ರಮ, ಬಡ ವರ್ಗಕ್ಕೆ ಧ್ವನಿಯಾಗಿದ್ದರು ಎಂದರು.
ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಮಾಲೆ ಮಾತನಾಡಿ, ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರನ್ನು ಸಮಾನತೆಯಿಂದ ನೋಡಬೇಕು ಎಂದರು.
ಲೇಖಕ ಯಶವಂತರಾಯ ಅಷ್ಠಗಿ ಮಾತನಾಡಿ, ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತೆ ಬೋಧಿಸುವ ಧರ್ಮವನ್ನಷ್ಟೇ ನಂಬುತ್ತೇನೆ ಎಂದಿದ್ದ ಅಂಬೇಡ್ಕರ್ ನಮಗೆ ಸದಾ ಬೆಳಕು ನೀಡುವ ಸೂರ್ಯನಿದ್ದಂತೆ ಎಂದರು.
ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀನಿವಾಸ ಸಡಗಿಯ ಶ್ರೀ ಡಾ.ರೇವಣಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಗೌರಿ ಪಾಟೀಲ್, ಡಾ.ಬಾಬುರಾವ ಶೇರಿಕಾರ, ನಾಗಣ್ಣ ರಾಂಪುರೆ, ಸುರೇಶ ಬಡಿಗೇರ, ಜಗದೇವಿ ಚಟ್ಟಿ ಇತರರಿದ್ದರು. ಪರಶುರಾಮ ಗರೂರ, ಅಂಬರೀಶ ಹೂಗಾರ, ಶಿವಮೂರ್ತಿ ಬಲಿಚಕ್ರವರ್ತಿ ಪ್ರಾರ್ಥಿಸಿದರು. ಅಂಬಾರಾವ ಮಡ್ಡೆ ನಿರೂಪಣೆ ಮಾಡಿದರು. ಅಂಬಾರಾಯ ಕೋಣೆ ವಂದಿಸಿದರು.

ಸಮಾನತಾ ರತ್ನ ಪ್ರಶಸ್ತಿ: ವಿವಿಧ ಕ್ಷೇತ್ರದ ಸಾಧಕರಾದ ಹಣಮಂತರಾವ ಬೈರಾಮಡಗಿ, ಬಾಬುರಾವ ಜಾಧವ್, ಶ್ರೀಮಂತ ಎಂ ಕೋಟ್ರೆ, ಅಣ್ಣಪ್ಪ ಎಸ್.ಜಿ, ಉದಯಕುಮಾರ ಸಾಲಿ, ಶಿವಶರಣಪ್ಪ ದೇಗಾಂವ, ಲೋಹಿತ್ ಕಟ್ಟಿ, ಮಹಾದೇವಿ ಕೆಸರಟಗಿ, ಮಲ್ಲಿಕಾರ್ಜುನ ವಠಾರ, ಚಂದ್ರಕಲಾ ಬಂಡೆ ಅವರಿಗೆ ಸಮಾನತಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕವಿಗೋಷ್ಠಿ: ಡಾ.ಕೆ.ಗಿರಿಮಲ್ಲ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಆಶಯ ನುಡಿಗಳನ್ನಾಡಿದರು. ಕವಿಗಳಾದ ಡಾ.ಸಂಗಣ್ಣ ಸಿಂಗೆ, ಡಾ.ಕರುಣಾ ಜಮದರಖಾನಿ, ಡಾ.ರಾಜಶೇಖರ ಮಾಂಗ್, ಮಲ್ಲಮ್ಮ ಕಾಳಗಿ, ರಮೇಶ ರಾಠೋಡ್, ಕವಿತಾ ಮಾಲಿ ಪಾಟೀಲ್, ಕಿರಣ ರಾಠೋಡ್, ನರಸಿಂಗರಾವ ಹೇಮನೂರ, ರಮೇಶ ನಾರಾಯಣಪುರ, ಮಾಲಾ ಕಣ್ಣಿ, ಧನಲಕ್ಷಿö್ಮÃ ಪಾಟೀಲ್, ಸುರೇಖಾ ಜೇವರ್ಗಿ, ಪ್ರೀತಮ, ಅದ್ವಿಕಾ, ಕಾವೇರಿ ದ್ಯಾಮಾ ಕವನ ವಾಚಿಸಿದರು. ಎಲ್ಲ ಕವಿಗಳಿಗೆ ಗೌರವ ಧನ ನೀಡಿ, ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net