ಶೋಷಿತರಿಗೆ ಧ್ವನಿಯಾಗಿ ಶಕ್ತಿ ತುಂಬಿದ್ದರು

01 KRN-1
ಕೆ.ಆರ್.ನಗರದಲ್ಲಿ ಅಚ್ಯುತಾನಂದ ಸ್ನೇಹ ಬಳಗ ಹಾಗೂ ಎವಿಎಸ್‌ಎಸ್ ವತಿಯಿಂದ ಸ್ವಾಭಿಮಾನಿ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪುಷ್ಪನಮನ ಅರ್ಪಿಸಲಾಯಿತು. ಹಂಗರಬಾಯನಹಳ್ಳಿ ತಮ್ಮಣ್ಣ, ಸಂಪತ್, ಅವಿನಾಶ್, ವಜ್ರೇಶ್, ಶಿವರಾಮ್, ಗೋವಿಂದರಾಜು, ರಾಜನಾಯಕ, ಈರಯ್ಯ, ರೇವಣ್ಣ, ಮಹದೇವಯ್ಯ ಇನ್ನಿತರರಿದ್ದರು.
Published on

ಕೆ.ಆರ್.ನಗರ: ಸುದೀರ್ಘ 50 ವರ್ಷಗಳಷ್ಟು ಜನನಾಯಕನಾಗಿ ಸೇವೆ ಮಾಡಿದ ವಿ.ಶ್ರೀನಿವಾಸಪ್ರಸಾದ್ ಅವರು ಶೋಷಿತರ ಧ್ವನಿಯಾಗಿದ್ದಲ್ಲದೇ ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅವರ ಸಾವು ಆಘಾತವನ್ನುಂಟು ಮಾಡಿದೆ ಎಂದು ತಾಪಂ ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ ಹೇಳಿದರು.

ಪಟ್ಟಣದ ಅಚ್ಯುತಾನಂದ್ ಸ್ನೇಹ ಬಳಗ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಿವಿದ್ಧೋದ್ದೇಶ ಸಹಕಾರ ಸಂಘದ ವತಿಯಿಂದ ಮಂಗಳವಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈ ಗೂಡಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಪ್ರಸಾದ್ ಎಂದು ಬಣ್ಣಿಸಿದರು.

ಶ್ರೀನಿವಾಸಪ್ರಸಾದ್ ಒಬ್ಬ ಲೆಕ್ಕಾಚಾರದ ರಾಜಕಾರಣಿ. ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿದ್ದ ಅವರ ಅಗಲಿಕೆಯಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಮುಂದಾಗುತ್ತಿದ್ದ ಅಪರೂಪದ ಮನಸ್ಸುಳ್ಳ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಸಂಪತ್, ಹಂಗರಬಾಯನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಅವಿನಾಶ್, ದಲಿತ ಮುಖಂಡರಾದ ವಜ್ರೇಶ್, ಶಿವರಾಮ್, ಗೋವಿಂದರಾಜು, ರಾಜನಾಯಕ, ಈರಯ್ಯ, ಎವಿಎಸ್‌ಎಸ್ ಸಂಘದ ರೇವಣ್ಣ, ನಿವೃತ್ತ ನೌಕರ ಮಹದೇವಯ್ಯ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net