ಶೋಷಿತರನ್ನೂ ಗುರುತಿಸಿ ಧೈರ್ಯ ತುಂಬಲಿ: ನಿವೃತ್ತ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ

mysore
Published on

ಮೈಸೂರು

ಮಹಿಳಾ ದಿನಾಚರಣೆ ಅಂಗವಾಗಿ ಜನನಿ ಸೇವಾ ಟ್ರಸ್ಟ್ ವತಿಯಿಂದ ಮಹಿಳೆ-ಕಹಳೆ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಜೆಎಸ್‌ಎಸ್‌ನ ನಿವೃತ್ತ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಮಾತನಾಡಿ, ಮಹಿಳಾ ದಿನಾಚರಣೆ ದಿನದಂದು ಸಾಧನೆ ಮಾಡಿದವರನ್ನು ಗುರುತಿಸಿದಂತೆ ಶೋಷಣೆಗೆ ಒಳಗಾದ ಮಹಿಳೆಯರನ್ನು ಗುರುತಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಜತೆಗೆ ಆರ್ಥಿಕ ಸಬಲೀಕರಣಕ್ಕೆ ಸೌಲಭ್ಯಗಳನ್ನು ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಮಹಿಳೆಯರಿಗೆ ಅನೇಕ ಜ್ವಲಂತ ಸಮಸ್ಯೆಗಳಿವೆ. ವಿಶ್ವದಾದ್ಯಂತ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕಿದೆ ಎಂದರು.

ದಾಸಪ್ಪ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜ ತುಳಸಿದಾಸ್ ಮಾತನಾಡಿ, ಯಶೋಧರ ದಾಸಪ್ಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪಿಸಿ, ಅವರು ಮಹಿಳೆಯರ ಏಳಿಗೆಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಈ.ಬನ್ನಮ್ಮ, ಸುಶೀಲ ನಂಜಪ್ಪ, ರಾಜೇಶ್ವರಿ, ಕೆ.ಬಿ.ಜಯಂತಿ, ಎಚ್.ಪಿ.ಪವಿತ್ರಾ, ಎಂ.ಬಿ.ಗೀತಾ, ಎಸ್.ಎಂ.ಉಮಾ, ಸೌಮ್ಯ, ಪುಷ್ಪಲತಾ, ಗಾಯತ್ರಿ, ಅನಸೂಯ, ಎಂ.ಕೆ.ಶೋಭಾ, ಮಾಲಿನಿ ಅಯ್ಯರ್, ರಶ್ಮಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ದಾಸಪ್ಪ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜ ತುಳಸಿದಾಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಉಪಾಧ್ಯಕ್ಷೆ ಡಾ.ಸುಜಾತಾ ಎಸ್.ರಾವ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಟ್ರಸ್ಟ್ ಅಧ್ಯಕ್ಷ ಎಂ.ಕೆ.ಅಶೋಕ್, ಪದಾಧಿಕಾರಿಗಳಾದ ಆರ್.ಸೌಮ್ಯ ಅಶೋಕ್, ಆರ್.ನಂದಿನಿ, ಗೌರವ್ ಸುಧಾ ಮುರಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net