

ಬೀದರ್: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಬೆಂಗಳೂರಿನಲ್ಲಿ ಭಾನುವಾರ (ಏ.9) ಹಮ್ಮಿಕೊಂಡಿರುವ ಶೋಷಿತರ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೀದರ್ ವಿಧಾನಸಭಾ ಕ್ಷೇತ್ರದ 50 ಜನ ಪ್ರಮುಖರು ಶನಿವಾರ ಖಾಸಗಿ ಬಸ್‍ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸೇರಿ ಘೋಷಣೆ ಕೂಗಿ ಅಲ್ಲಿಂದ ಪ್ರಯಾಣ ಆರಂಭಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಪಕ್ಷದ ಜಿಲ್ಲಾ ಎಸ್.ಟಿ. ಘಟಕದ ಉಪಾಧ್ಯಕ್ಷ ರಾಜಕುಮಾರ ಕಂದಗೂಳೆ, ಮುಖಂಡರಾದ ತುಕಾರಾಮ ಚಿಮಕೋಡ್, ಶ್ರೀಪತರಾವ್ ದೀನೆ, ಶಿವಕುಮಾರ ನೀಲಕಟ್ಟಿ, ಅಮೃತ ಮುತ್ತಂಗಿಕರ್, ಶಿವರಾಜ ಸಾಗರ್, ರಾಜಕುಮಾರ ಜ್ಯೋತಿ, ಧನರಾಜ ಮೇತ್ರೆ, ರಮೇಶ ಕಪಲಾಪುರ, ರಮೇಶ ಟೊಳ್ಳೆ, ರಾಜಕುಮಾರ ಚಾಂಬೋಳ್, ಅನಿಲ್ ಕಪಲಾಪುರ ಮೊದಲಾದವರು ಬೆಂಗಳೂರಿಗೆ ತೆರಳಿದರು.