ಶೋಷಿತರ ಪರ ಹೋರಾಟಕ್ಕಾಗಿ ಮಯೂರ ಯುವ ಸೇನೆ ಅಸ್ತಿತ್ವಕ್ಕೆ

11 ckm 10 raghavendra mattavara
ರಾಘವೇಂದ್ರ ಮತ್ತಾವರ
Published on

ಚಿಕ್ಕಮಗಳೂರು: ಮಯೂರ ಯುವ ಸೇನೆಯು ಸಾಮಾಜಿಕ ಕಳಕಳಿ ಸಂಘಟನೆಯಾಗಿದ್ದು, ಸಮಾಜಪರ, ಶೋಷಿತ ವರ್ಗದವರ ಪರವಾಗಿ ಹೋರಾಟ ಮಾಡಲು ಸಂಘಟನೆಯನ್ನು ರಚಿಸಲಾಗಿದೆ ಎಂದು ಸೇನೆಯ ಅಧ್ಯಕ್ಷ ರಾಘವೇಂದ್ರ ಮತ್ತಾವರ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಯೂರ ಯುವ ಸೇನೆಯು ಜಿಲ್ಲೆಯಾದ್ಯಂತ ಸಮಾಜವನ್ನು ಎಚ್ಚರಿಸುವ ಜೊತೆಗೆ ಜನಪರವಾಗಿ ಹೋರಾಟ ನಡೆಸಲು ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ರೈತರು ಮತ್ತು ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳನ್ನು ನಿವಾರಿಸಲು ಹೋರಾಟಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಸೇರಿದಂತೆ ಹಲವಾರು ಇಲಾಖೆಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇಲಾಖೆಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಸಂಬAಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಮತ್ತಾವರ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ ಮತ್ತು ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಕಲ್ಲು ಗಣಿಗಾರಿಕೆಯಿಂದ ಕುಡಿಯುವ ನೀರು ಮತ್ತು ಬೋರ್‌ವೆಲ್ ಮೂಲಗಳಿಗೆ ತೊಂದರೆಯಾಗುತ್ತಿದ್ದು, ಜಿಲ್ಲಾಡಳಿತ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ಅವರು ಸರಿಯಾದ ಸಮಯಕ್ಕೆ ಶಾಲಾ, ಕಾಲೇಜು ತಲುಪಲು ಆಗುತ್ತಿಲ್ಲ. ಸಂಬAಧಿಸಿದ ಅಧಿಕಾರಿಗಳು ಗ್ರಾಮೀಣ ಭಾಗದ ಊರುಗಳಿಗೆ ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನು ಓಡಿಸುವಂತೆ ಮನವಿ ಮಾಡಿದರು.

ಮಯೂರ ಯುವ ಸೇನೆಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಕೌಶಿಕ್, ಪುನೀತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಗತ್, ಸಹ ಕಾರ್ಯದರ್ಶಿಯಾಗಿ ಸಚಿನ್, ಪ್ರಮೋದ್, ಖಜಾಂಚಿಯಾಗಿ ರಕ್ಷಿತ್, ಸದಸ್ಯರುಗಳಾಗಿ ದರ್ಶನ್, ಜೀವನ್, ಧನುಷ್, ಮದನ್ ಕುಮಾರ್, ಪ್ರೀತಂ, ಪ್ರದೀಪ್, ಮನ್ವಿತ್, ಸುಜಯ್, ತಾಲ್ಲೂಕು ಅಧ್ಯಕ್ಷರಾಗಿ ಸುನೀಲ್, ಕಾರ್ಯದರ್ಶಿಯಾಗಿ ಸುಮಂತ್ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸ್ವಾಗತ್, ಪುನೀತ್, ಕೌಶಿಕ್, ಸಚಿನ್, ಪ್ರಮೋದ್, ದರ್ಶನ್, ಧನುಷ್, ಸುನೀಲ್, ಸುಮಂತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net