ಶೋಷಿತ ವರ್ಗದ ಆಶಾಕಿರಣ

14 gkp 02
Published on

ಗೋಣಿಕೊಪ್ಪ: ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ನಿಟ್ಟೂರು-ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಳಿಂಬೆ ಕಾಲನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.


ಸಮಿತಿಯ ರಾಜ್ಯ ಸದಸ್ಯ ಟಿ.ಎನ್.ಗೋವಿಂದಪ್ಪ ಮಾತನಾಡಿ, ಅಂಬೇಡ್ಕರ್ ಮಹಾನ್ ಮಾನವತಾವಾದಿ, ಶೋಷಿತ ವರ್ಗದ ಆಶಾಕಿರಣ. ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದರು. ಕಾನೂನು ರೂಪದಲ್ಲಿ ನಮಗೆ ಸಂವಿಧಾನ ಕೊಟ್ಟು ಅಸಮಾನತೆ ಹೋಗಲಾಡಿಸಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಶಿಕ್ಷಣ ಒಂದೇ ಅಸಮಾನತೆ ಹೋಗಲಾಡಿಸಲು ಇರುವ ಮಾರ್ಗ ಎಂದು ಅಂಬೇಡ್ಕರ್ ಅವರ ಜೀವನ ಚರಿತ್ರೆ ಹೇಳುತ್ತದೆ ಎಂದರು.


ಎಸ್.ಟಿ.ಗಿರೀಶ್ ಹಾಗೂ ಗೋವಿಂದಪ್ಪ ಕ್ರಾಂತಿಗೀತೆ ಹಾಡಿದರು. ನಿಟ್ಟೂರು ಕಾರ್ಮಾಡು ಗ್ರಾಮ ಸಂಚಾಲಕ ಜೆ.ಕೆ.ವಿಜಯ, ಸಂಘಟನಾ ಸಂಚಾಲಕ ಸಿಂಗಿ ಸತೀಶ್, ಮಹಿಳಾ ಸಂಚಾಲಕಿ ಲಕ್ಷ್ಮೀ, ತಾಲೂಕು ಸಂಚಾಲಕ ಕುಮಾರ್, ಸಮಿತಿಯ ಪ್ರಮುಖರಾದ ಎಚ್.ಬಿ. ಮುರುಗ, ವಿ.ಟಿ.ಜಯ, ವಿಜಯಕುಮಾರ್, ಷಣ್ಮುಗ, ರವಿ, ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net