ಶೋಷಣೆ ವಿರುದ್ಧ ಹೋರಾಡಲಿ

9SNK1
Published on

ಸಂಕೇಶ್ವರ: ತೊಟ್ಟಿಲು ತೂಗುವ ಕೈ ದೇಶವನ್ನಾಳಬಹುದು ಎಂಬುದನ್ನು ಮಹಿಳೆ ಸಾಬೀತುಪಡಿಸಿದ್ದಾರೆ. ಸಾಮಾಜಿಕ ಶೋಷಣೆ ವಿರುದ್ಧ ಮಹಿಳೆಯರು ಒಗ್ಗೂಡಿ ಹೋರಾಡಬೇಕಿದೆ ಎಂದು ವಿಶ್ವಚೇತನ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಕೆ.ಪಾಟೀಲ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಎಂಬುದು ಅತ್ಯಮೂಲ್ಯ ಸಂಪತ್ತಾಗಿದೆ. ಪ್ರತಿಯೊಬ್ಬ ಹೆಣ್ಣು ಮಗಳು ಸುಶಿಕ್ಷಿತಳಾದಲ್ಲಿ ಮಾತ್ರ ಸಮಾಜದಲ್ಲಿ ಪರಿವರ್ತನೆ ಯುಗ ಆರಂಭವಾಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಽಕಾರಿ ಪ್ರಭಾವತಿ ಪಾಟೀಲ ಮಾತನಾಡಿ, ಸುಂದರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಸ್ವಾಮಿ ವಿವೇಕಾನಂದ ಶಾಲೆ ಪ್ರತಿವರ್ಷ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮಾತೆಯರ ಋಣ ತೀರಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಮಾಜ ಸುಧಾರಕಿ ಹೇಮಲತಾ ಇಂಡಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಜವಾಬ್ದಾರಿ ಅರಿತು ಕಾರ್ಯ ಮಾಡಿದಲ್ಲಿ ಮಹಿಳಾ ಸಬಲೀಕರಣದ ಆಶಯ ಈಡೇರುತ್ತದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುನೀತಾ ಹೆದ್ದೂರಶೆಟ್ಟಿ, ಅರ್ಚನಾ ಓತಾರೆ, ಶಿವಲೀಲಾ ಹಿರೇಮಠ, ಪ್ರೇಮಾ ಕರಜಗಿ, ಶರ್ವರಿ ಕೊಡನೇಕರ, ಸುಜಾತಾ ಖಾಡೆ, ಗಿರಿಜಾ ಮಠಪತಿ, ಅವಕ್ಕಾ ಕರನಿಂಗ, ಸುನೀತಾ ಮಠಪತಿ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆ ಆಯೋಜನೆ: ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ವಿನ್ಯಾಸದ ಸೀರೆ ಉಡುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಿಳಾ ಸಂಘಗಳು ತಯಾರಿಸಿದ ವಿವಿಧ ಖಾದ್ಯ ಹಾಗೂ ಗೃಹ ಬಳಕೆ ವಸ್ತುಗಳ ಮಾರಾಟ ಮಳಿಗೆಗಳು ಎಲ್ಲರ ಗಮನ ಸೆಳೆದವು. ನೃತ್ಯ-ಮನರಂಜನಾ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದರು.

ಅಶ್ವಿನಿ ನೇರ್ಲಿ ಅಧ್ಯಕ್ಷತೆ, ಅತಿಥಿಗಳಾಗಿ ಸುರೇಖಾ ಪಾಟೀಲ, ಪ್ರಸೂತಿ ತಜ್ಞೆ ಡಾ. ಆಶಾ ಪಾಟೀಲ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net