

ಚಿಕ್ಕಮಗಳೂರು: ವಿದ್ಯಾರ್ಥಿಗಳು ಪ್ರಕೃತಿಯನ್ನು ನೋಡಿ ಅದರಿಂದ ಪಾಠ ಕಲಿಯಬೇಕು. ಕಾಕಡ-ಮಲ್ಲಿಗೆ ಮುಂತಾದ ಹೂವುಗಳು ಕೇವಲ ಒಂದು ದಿನಕ್ಕೆ ತಮ್ಮ ಬದುಕನ್ನು ಮೀಸಲಿಟ್ಟರೂ ಅವುಗಳು ಹೇಗೆ ಸುಗಂಧಿತ ಸುವಾಸನೆಯನ್ನು ನೀಡಿ ತಮ್ಮ ಜೀವಿತವನ್ನು ಖುಷಿಯಿಂದ ಕಳೆಯುತ್ತದೆಯೋ ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಪೂರ್ಣ ಬದುಕನ್ನು ಯಾವುದೇ ಪರಿಸ್ಥಿತಿ ಬರಲಿ ಅವುಗಳನ್ನು ಒಪ್ಪಿ ಅಪ್ಪಿಕೊಂಡು ಛಲದಿಂದ ಭವ್ಯ ಭವಿಷ್ಯದತ್ತ ಸಾಗಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಭಾಷಣಕಾರ ಭಾಷಣ ಮಾಡುವಾಗ ಶೋತೃಗಳು ಭಾಷಣವನ್ನು ಕೇವಲ ಕಿವಿಯಿಂದ ಕೇಳಿಸಿಕೊಳ್ಳದೇ ಪೂರ್ಣ ಹೃದಯದಿಂದ ಆಲಿಸುವ ಪರಿಪಾಠವಾದಗ ಆ ಕ್ರಿಯೆ ಶ್ರವಣ ಯೋಗ ಎನಿಸುತ್ತದೆ. ಅಂತೆಯೇ ಯಾವುದೇ ಭಾಷಣಕಾರ ಕೇವಲ ತನ್ನ ನಾಲಿಗೆಯಿಂದ ಮಾತನಾಡದೆ ಹೃದಯ ಸ್ಪರ್ಶಿ ಭಾಷಣ ಮಾಡಿದಾಗ ಅದು ಪ್ರವಚನ ಯೋಗ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತಮ್ಮ ವಿದ್ಯಾರ್ಥಿ ದಿಸೆಯನ್ನು ನೆನಪಿಸಿಕೊಂಡ ಅವರು ಆ ಕಾಲದಲ್ಲಿ ನಮಗೆ ಇಂದಿನAತೆ ಟೆಕ್ನಾಲಜಿಯಾಗಲಿ, ಯಾವುದೇ ಅಡ್ವಾನ್ಸ್ಮೆಂಟ್ ಆಗಲಿ ಇರಲಿಲ್ಲ. ವರ್ಲ್ಡ್ ಮ್ಯಾಪ್ ನೋಡುವುದೇ ಒಂದು ಅದ್ಭುತವಾಗಿತ್ತು. ಶಾಲೆಗೆ ಒಮ್ಮೆ ಗುರುಗಳು ವರ್ಲ್ಡ್ ಮ್ಯಾಪ್ ತಂದಾಗ ಖುಷಿ ಪಟ್ಟ ನಾನು ನನ್ನ ಊರನ್ನು ಅದರಲ್ಲಿ ಹುಡುಕಿದೆ ಸಿಗದೆ ಹೋದಾಗ ಕನಿಷ್ಟ ಬಿದರೆ ಗ್ರಾಮ ಕಂಡು ಸಂತಸಪಟ್ಟು ಗುರುಗಳಿಗೆ ತೋರಿಸಿದಾಗ ಅದು ಬಿದರೆ ಅಲ್ಲ ಅದು ಬೀದರ್ ಎಂದು ತಿಳಿಯಿತು ಎಂದು ಅಂದಿನ ಹಾಸ್ಯದ ಪ್ರಸಂಗ ಮೆಲುಕು ಹಾಕಿದರು.
ತಮ್ಮ ಕಾಲದ ಉಪಾಧ್ಯಾಯರ ಬೋದನಾ ಪ್ರಾವಿಣ್ಯತೆಗೂ ಮತ್ತು ಇಂದಿನ ಆಧುನಿಕತೆಯ ಕಂಪ್ಯೂಟರಿಕರಣಗೊAಡಿರುವ ಶಿಕ್ಷಣ ಕಲಿಕೆಗೂ ತುಲನೆ ಮಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಗಳಾಗದೆ ಸಂಸ್ಕಾರದ ವಿನಯ ವಂತಿಕೆಯ ಸದ್ಭುದ್ದಿಗಳ ಆಗರವಾಗಬೇಕು ಎಂದು ಹೇಳಿದರು.
ಚಿಕ್ಕಮಗಳೂರು ಕೆಮಿಕಲ್ ವರ್ಕ್ಸ್ ಮಾಲೀಕ ನಿಹಾಜ್ ಅಹಮ್ಮದ್ ಮಾತನಾಡಿ, ನಾವು ಎಲ್ಲಿ ಹೋದರೂ ನಮ್ಮ ಮೂಲ ಭಾಷೆಯಾದ ಕನ್ನಡವನ್ನು ಮರೆಯಬಾರದು. ಯಾವುದೇ ಅಪರಿಚಿತ ಸ್ಥಳದಲ್ಲೂ ಒಬ್ಬ ಕನ್ನಡಿಗನಿಗೆ ಮತ್ತೋರ್ವ ಕನ್ನಡಿಗ ಸಿಕ್ಕಾಗ ಆಗುವ ಅಪರಿಮಿತ ಆನಂದವೇ ಬೇರೆ. ಕನ್ನಡಿಗ ಎಂಬ ಹೆಮ್ಮೆ ಸದಾ ಪ್ರತಿಯೊಬ್ಬ ಕನ್ನಡಿಗನ ಹೃದಯಸ್ಥಾಯಿ ಭಾಷೆಯಾಗಬೇಕು ಎಂದರು.
ಸAಸ್ಥೆಯ ಅಧ್ಯಕ್ಷ ಡಾ. ಗ್ರೆಗರಿ ವಿನೋದ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಧನೆಯತ್ತ ಹೆಚ್ಚು-ಹೆಚ್ಚಾಗಿ ಆಸಕ್ತಿ ವಹಿಸಿ ಗುರು-ಹಿರಿಯರು ಹಾಗೂ ಹೆತ್ತವರು ಹೆಮ್ಮೆ ಪಡುವಂತೆ ಮಾಡಬೇಕು ಎಂದು ಹೇಳಿದರು.
ಪ್ರಾಚಾರ್ಯೆ ಸುಷ್ಮಾ ಕಾಲೇಜಿನ ವಾರ್ಷಿಕ ವರದಿಯನ್ನು ಓದಿದರು. ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ತದ ನಂತರದಲ್ಲಿ ವಿವಿಧ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.