ಶೋಟೊಕನ್ ವರ್ಲ್ಡ್ ಕರಾಟೆ ಗ್ರಾಂಡ್ ಮಾಸ್ಟರ್ ಪೀರ್ರೆ ಎಫ್.ಮೌಲೆ ಭೇಟಿ

ಶೋಟೊಕನ್ ವರ್ಲ್ಡ್ ಕರಾಟೆ ಗ್ರಾಂಡ್ ಮಾಸ್ಟರ್ ಪೀರ್ರೆ ಎಫ್.ಮೌಲೆ ಭೇಟಿ
Published on

ಹಾಸನ: ಸಂದಿಗ್ಧ ಪರಿಸ್ಥಿತಿಯಲ್ಲಿ ಕರಾಟೆ ನೆರವಿಗೆ ಬರುವ ಶಿಕ್ಷಣವಾಗಿದ್ದು, ಮುಖ್ಯವಾಗಿ ಹೆಣ್ಣು ಮಕ್ಕಳು ಕರಾಟೆಯಲ್ಲಿ ನೈಪುಣ್ಯತೆ ಸಾಧಿಸಬೇಕೆಂದು ಅಮೆರಿಕ ಮೂಲದ ಶೋಟೊಕನ್ ವರ್ಲ್ಡ್ ಕರಾಟೆ ಗ್ರಾಂಡ್ ಮಾಸ್ಟರ್ ಪೀರ್ರೆ ಎಫ್.ಮೌಲೆ ಅವರು ಸಲಹೆ ನೀಡಿದರು.
ನಗರದ ಕರಾಟೆ ಕೇಂದ್ರಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡಿದರು. ಶಾಲಾ ಕಾಲೇಜು ಹಂತದಲ್ಲಿಯೇ ಮಕ್ಕಳಿಗೆ ಕರಾಟೆಯ ಪರಿಚಯ ಮಾಡಿಸಬೇಕು. ವಿದ್ಯಾಭ್ಯಾಸದ ಜೊತೆಗೆ ಆತ ರಕ್ಷಣೆಯೂ ಮುಖ್ಯವಾಗುತ್ತದೆ. ಕರಾಟೆ ಕಲಿತರೆ ಮಕ್ಕಳ ಆತಸ್ಥೈರ್ಯ ಹೆಚ್ಚುತ್ತದೆ. ಜೊತೆಗೆ ಸದೃಢ ಆರೋಗ್ಯ ಹೊಂದಬಹುದು ಎಂದು ಹೇಳಿದರು.
ಪೀರ್ರೆ ಎಫ್.ಮೌಲೆ ಅವರು ಹಾಸನ ತಾಲ್ಲೂಕಿನ ದುದ್ದದಲ್ಲಿರುವ ಶ್ರೀ ವಿದ್ಯಾ ಪೀಠ ಪಬ್ಲಿಕ್ ಶಾಲೆ, ಹಾಸನದ ಆರ್‌ಸಿ ರಸ್ತೆಯಲ್ಲಿರುವ ಹೋಲಿಮೌಂಟ್ ಶಾಲೆ, ಚನ್ನಪಟ್ಟಣದ ಎಸ್‌ಜಿಆರ್ ಶಾಲೆ, ಡೇರಿ ವೃತ್ತದಲ್ಲಿರುವ ಅಲಹುದಾ ಅಕಾಡೆಮಿ, ವಿಜಯ ನಗರದ ಸಿಟಿಝನ್ಸ್ ಹಾಗು ಆಜಾದ್ ರಸ್ತೆಯಲ್ಲಿರುವ ದಿ ಇಂಟಲಿಜೆಸ್ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಕರಾಟೆ ಸಂಸ್ಥೆ ಅಧ್ಯಕ್ಷ ಮಹಮದ್ ಆರಿಫ್, ಜಿಲ್ಲಾ ಅಮೆಚೂರ್ ಕರಾಟೆ ಸಂಸ್ಥೆಯ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net