ಶೈಕ್ಷಣಿಕ ಸಾಮಗ್ರಿ ವಿತರಣೆ

DSC_0623
Published on

ಬೀದರ್: ನಗರದ ಮೈಲೂರ ಕ್ರಾಸ್ ಹತ್ತಿರದ ರಾವ್ ಬಹಾದೂರ್ ಶಾಲೆಯಲ್ಲಿ ಬುಧವಾರ ಎಂ.ಬಿ.ಪಾಟೀಲ್ ಜನ್ಮ ದಿನದ ನಿಮಿತ್ತ ಅಖಿಲ ಕನರ್ಾಟಕ ಎಂ.ಬಿ.ಪಾಟೀಲ್ ಅಭಿಮಾನಿ ಬಳಗದಿಂದ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ನೋಟ್ಬುಕ್ ಸೇರಿ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ಜಿಪಂ ಮಾಜಿ ಸದಸ್ಯ ಶಿವರಾಜ ಪಾಟೀಲ್ ಅತಿವಾಳ ಚಾಲನೆ ನೀಡಿ, ಶರಣತತ್ವ, ಸಿದ್ಧಾಂತ ಮೇಲೆ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು. ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಭತಮುಗರ್ೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ಆನಂದ ಘಂಟೆ, ನಾಗಯ್ಯ ಸ್ವಾಮಿ ಮಾತನಾಡಿದರು. ಪ್ರಮುಖರಾದ ಅರವಿಂದ ಕಾರಬಾರಿ, ಮಹೇಶ ಸಾವಳಗಿ, ವೀರಶೆಟ್ಟಿ ಪಾಟೀಲ್, ಶಿವು ಪಾಟೀಲ್, ಜಗದೀಶ ಪಾಟೀಲ್, ನಿಖಿಲ್ ಚಿಮಕೋಡ ಇದ್ದರು. ನಾಗಶೆಟ್ಟಿ ಧರಂಪುರ ಸ್ವಾಗತಿಸಿ, ನಿರೂಪಣೆ ಮಾಡಿದರು. ಮುಖ್ಯ ಗುರು ಜಗದೇವಿ ಬ್ಯಾಳೆ ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net