

ರಾಯಚೂರು: ಕಟ್ಟಡ ಕಾರ್ಮಿಕರ ಶೈಕ್ಷಣಿಕ ಸಹಾಯಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ೆಡರೇಷನ್‌ನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕಟ್ಟಡ ಕಾರ್ಮಿಕರ ಕಾರ್ಡ್‌ಗಳ ನವೀಕರಣಕ್ಕೆ ವೇತನ ಚೀಟಿ, ಹಾಜರಾತಿ ಕಡ್ಡಾಯ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಹೊಸ ಕಾರ್ಡ್‌ಗೆ ಅರ್ಜಿ ಹಾಕಿದ ಕಾರ್ಮಿಕರಿಗೆ ತಕ್ಷಣ ದಾಖಲೆ ಪರಿಶೀಲನೆ ಮಾಡಿ ಕಾರ್ಡ್ ವಿತರಣೆಗೆ ವಿಳಂಬ ಧೋರಣೆ ತೋರಿದ ಕಾರ್ಮಿಕ ನಿರೀಕ್ಷಕ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮೇಲೆ ಕ್ರಮ ಜರುಗಿಸಬೇಕು. ಲಿಂಗಸುಗೂರು, ದೇವದುರ್ಗದಲ್ಲಿನ ಕಾರ್ಮಿಕ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು.
ಬೋಗಸ್ ಕಾರ್ಡ್ ನಿಯಂತ್ರಣ ಮಾಡಿ ನೈಜ ಕಾರ್ಮಿಕರಿಗೆ ಮಾತ್ರ ಹೊಸ ಕಾರ್ಡ್ ನೀಡಬೇಕು. ಕಾರ್ಮಿಕ ಇಲಾಖೆಯ ಜೀವಿತ ಪ್ರಮಾಣಪತ್ರ ನೀಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸಲು ಇರುವ ಕಾಲಮಿತಿ ರದ್ದುಗೊಳಿಸಿ ಎಲ್ಲ ಸಮಯದಲ್ಲಿ ಹಾಕಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರುದ್ರಪ್ಪ ನಾಯಕ, ಜಂಟಿ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ಪದಾಕಾರಿಗಳಾದ ಯುಸ್ೂ ಗ್ವಾಡಿಕಾರ, ಅನ್ವರ್ ಪಾಷಾ, ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ಎಚ್.ಪದ್ಮಾ, ನಿಂಗಪ್ಪ, ಶರ್ುದ್ದೀನ್ ಪೋತ್ನಾಳ, ವೆಂಕಟೇಶ ಪಾಲ್ಗೊಂಡಿದ್ದರು.