

ಆಳಂದ: ಗುಣಮಟ್ಟದೊAದಿಗೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡು ಲೋಕಾರ್ಪಣೆ ಸಿದ್ಧವಾಗಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಸೂಚನೆ ನೀಡಿದರು.
ತಾಲೂಕು ಆಡಳಿತ ಕಚೇರಿ ಎದುರುಗಡೆ ಕೆಕೆಆರ್‌ಡಿಬಿ ಯೋಜನೆಯಡಿ 5.17 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಪಾಲಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ಉz್ದೆÃಶದಿಂದ 3 ಎಕರೆಯಲ್ಲಿ ಸುಸಜ್ಜಿತ ಕಾಲೇಜು ನಿರ್ಮಿಸಲಾಗುತ್ತಿದೆ. 20 ಕೋಠಡಿಗಳು ಇರಲಿದ್ದು, ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರಾಚಾರ್ಯ ರವೀಂದ್ರ ಕಂಠೆಕೋರೆ, ಎಇಇ ಆನಂದಕುಮಾರ, ಜೆಇ ಸೂರ್ಯಕಾಂತ ಗಾಯಕವಾಡ, ಗುತ್ತಿಗೆದಾರ ಮಹಾಂತೇಶ ಬಳಗಾನೂರ, ಪುರಸಭೆ ಸದಸ್ಯ ಪೀರ್ದೋಷ್ ಅನ್ಸಾರಿ, ಪ್ರಮುಖರಾದ ಅಮ್ಜದ್ ಅಲಿ ಕರಜಗಿ, ತಯ್ಯಬ್ ಅಲಿ ಶೇಖ್, ರಾಜಶೇಖರ ಪಾಟೀಲ್ ಚಿತಲಿ, ಶಿವಪುತ್ರಪ್ಪ ಪಾಟೀಲ್ ಮುನ್ನಹಳ್ಳಿ, ಸುಲ್ತಾನಪ್ಪ ವಾಗ್ದರಗಿ, ಮಲ್ಲಿನಾಥ ಹತ್ತರಕಿ, ಮಲ್ಲಿನಾಥ ಪಾಟೀಲ್ ಮದಗುಣಕಿ, ವೈಜನಾಥ ಪಾಟೀಲ್, ಗುರುಲಿಂಗ ಜಂಗಮ ಪಾಟೀಲ್, ಗುರುಶರಣ ಪಾಟೀಲ್ ಕೋರಳ್ಳಿ, ರವೀಂದ್ರ ಪಾಟೀಲ್ ಆಳಂಗಾ, ದಿಲೀಪ್ ಕ್ಷೀರಸಾಗರ, ಶರಣಬಸಪ್ಪ ವಾಗೆ ಇತರರಿದ್ದರು.