ಜೇವರ್ಗಿ; ಶೈಕ್ಷಣಿಕ ಮಟ್ಟ ಸುಧಾರಣೆಗೆ ಕ್ರಮ- ಡಾ.ಅಜಯಸಿಂಗ್​

PH 06
Published on

ಜೇವರ್ಗಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಕರೆ ನೀಡಿದರು.

ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿ ಧರ್ಮಸಿಂಗ್ ಫೌಂಡೇಷನ್‌ನಿAದ ಅಕ್ಷರ-ಆವಿಷ್ಕಾರ ಮೂಲಕ ವಿದ್ಯಾರ್ಥಿಗಳಿಗೆ ಪೂರಕವಾಗುವ ಪುಸ್ತಕ ನೀಡುವುದರ ಜತೆಗೆ ಬೋಧನೆ ಮತ್ತು ಸಂಯೋಜಿತ ಅಧ್ಯಯನಕ್ಕೆ ಪ್ರೇರೇಪಿಸಲಾಗಿತ್ತು. ಅಂತಲೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಟಿ. ಬಿರಾದಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಡುಲಾಲ್ ಶೇಖ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮರೆಪ್ಪ ಮೂಲಿಮನಿ, ಪ್ರಮುಖರಾದ ಪ್ರಭುಗೌಡ ದೇಸಾಯಿ, ವಿಜಯಕುಮಾರ ರಾಠೋಡ್, ಬಸವರಾಜ ತೇಲ್ಕರ್, ಸಿದ್ದಲಿಂಗರೆಡ್ಡಿ ಇಟಗಿ, ರುಕುಂ ಪಟೇಲ್ ಇಜೇರಿ, ಶಾಂತಪ್ಪ ಕೂಡಲಗಿ, ರಾಜಶೇಖರ ಸೀರಿ, ಮಹ್ಮದ್ ಸೋಫಿ ಸಗರಿ, ಅಬ್ದುಲ್ ಮಾಜಿದ್ ಗಿರಣಿ, ಖಾಸೀಂ ಪಟೇಲ್ ಮುದವಾಳ, ಮೌಲಾನಾ ಶರ್ಫುದ್ದೀನ್ ಸಾಬ್, ಅಬ್ದುಲ್ ರಹಿಮಾನ್ ಪಟೇಲ್, ಬಹಾದ್ದೂರ್ ರಾಠೋಡ್, ಇಬ್ರಾಹಿಂ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net