

ಯಾದಗಿರಿ: ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಾಲಾ ಶಿP್ಷÀಣ ಮತ್ತು ಸಾP್ಷÀರತಾ ಇಲಾಖೆ, ಜಿ¯್ಲÁಡಳಿತ ಹಾಗೂ ಜಿ¯್ಲÁ ಪಂಚಾಯಿತಿ, ಅP್ಷÀರ ದಾಸೋಹ- ಮಧ್ಯಾಹ್ನ ಉಪಾಹಾರ ಯೋಜನೆಯಡಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಅರಿಕೇರಾ(ಕೆ) ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ವಿತರಣೆಗೆ ಚಾಲನೆ ನೀಡಿದ ಅವರು, ಶಿಕ್ಷಣದಲ್ಲಿ ಯಾದಗಿರಿ ಮೊದಲ ಸ್ಥಾನ ಬರುವುದಕ್ಕೆ ನಾನು ಗ್ಯಾರಂಟಿ ಕೊಡುವೆ. ಮಕ್ಕಳಿಗೆ ಊಟ ಕೊಟ್ಟರೆ ದೇವರಿಗೆ ನೈವೇದ್ಯ ಅರ್ಪಿಸಿದಂತೆ ಎಂದರು.
ಇಲಾಖೆ ವ್ಯಾಪ್ತಿಯ ೭೬ ಸಾವಿರ ಶಾಲೆಗಳಲ್ಲಿ ೬೦ ಲP್ಷÀ ಮಕ್ಕಳು ಅಭ್ಯಸಿಸುತ್ತಿದ್ದಾರೆ. ರಾಜ್ಯಾದ್ಯಂತ ಇಂದಿನಿAದ ವಾರದ ಆರು ದಿನ ಮೊಟ್ಟೆ ವಿತರಣೆ ಮಾಡುತ್ತಿದ್ದು, ೫೭ ಲP್ಷÀ ಮಕ್ಕಳು ಪಡೆಯಲಿದ್ದಾರೆ. ಅಜೀಂ ಪ್ರೇಮ್‌ಜಿ ಫೌಂಡೇಷನ್ ಸರ್ಕಾರದ ಜತೆ ಕೈಜೋಡಿಸಿರುವುದಕ್ಕೆ ಧನ್ಯವಾದ ಹೇಳಿದ ಅವರು, ಸರ್ಕಾರ ಈ ಯೋಜನೆಗಾಗಿ ಮೂರು ವರ್ಷಕ್ಕೆ ೧೫೯೧ ಕೋಟಿ ರೂ. ವೆಚ್ಚ ಮಾಡುತ್ತಿದೆ. ಅಲ್ಲದೆ ೫೦೦೦ ಶಿಕ್ಷಕರ ನೇಮಕ ಮಾಡಿ ಕಲ್ಯಾಣ ಕರ್ನಾಟಕಕ್ಕೆ ನಿಯೋಜಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಶಿಕ್ಷಣ ಸಚಿವರ ಸತತ ಪ್ರಯತ್ನದಿಂದ ಮಕ್ಕಳಿಗೆ ಎರಡು ದಿನ ಬದಲು ಆರು ದಿನ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಯಾದಗಿರಿ ಜಿಲ್ಲೆಯಿಂದ ಚಾಲನೆ ನೀಡಿದ್ದು ಖುಷಿ ತಂದಿದೆ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿರುವುದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಡ್ಡಾಯವಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಕೋರಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಾಲಕರು ಮಾಡದ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್ ಶೇ.೮೦ ಅನುದಾನ ಸಮಾಜ ಸೇವೆಗೆ ವಿನಿಯೋಗ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅಜೀಂ ಪ್ರೇಮïಜಿ ಫೌಂಡೇಷನ್ ಮುಖ್ಯಸ್ಥ ರುದ್ರೇಶ ಎಸ್., ಶಾಲಾ ಶಿP್ಷÀಣ ಮತ್ತು ಸಾP್ಷÀರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್, ಶಿP್ಷÀಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ, ಪದವಿಪೂರ್ವ ಶಿP್ಷÀಣ ಇಲಾಖೆ ಹಾಗೂ ಪಿಎಂ ಪೋಷಣ್ ನಿರ್ದೇಶಕ ಸಿಂಧು ಬಿ.ರೂಪೇಶ್, ಶಾಲಾ ಶಿP್ಷÀಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಎಸ್., ಜಿಪಂ ಸಿಇಒ ಲವೀಶ್ ಓರ್ಡಿಯಾ, ಡಿಡಿಪಿಐ ಮಂಜುನಾಥ, ಅP್ಷÀರ ದಾಸೋಹ ಯೋಜನೆ ಶಿP್ಷÀಣಾಧಿಕಾರಿ ಕನಕಪ್ಪ, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಎಸ್‌ಡಿಎಂಸಿ ಅಧ್ಯP್ಷÀ ಸಿದ್ದಲಿಂಗಯ್ಯ ಸ್ವಾಮಿ, ಪ್ರಾಥಮಿಕ ಶಾಲೆ ಅಧ್ಯP್ಷÀ ಸಿದ್ರಾಮ ಬೀರೆ ಇತರರಿದ್ದರು. ಕರ‍್ಯಕ್ರಮಕ್ಕೂ ಮುನ್ನ ಶಿಕ್ಷಣ ಸಚಿವರು ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಮಾಡಿದರು.