ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ಮಿತ್ರ ಸಂಜೀವಿನಿ: ರಾಜಲಾಂಛನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನಂದಿ ಬಣ್ಣನೆ

08ank news and photos 03
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿದ್ಯಾರ್ಥಿಗಳ ಪಾಲಿನ ಸಂಜೀವಿನಿಯಾಗಿದೆ . ಈ ನಿಟ್ಟಿನಲ್ಲಿ ಪ್ರತಿವರ್ಷ ರಾಜಲಾಂಛನ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಂಚಿಕೆಯನ್ನು ವಿತರಿಸಲಾಗುತ್ತಿದೆ ಎಂದು ರಾಜಲಾಂಛನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನಂದಿ ಹೇಳಿದರು.
ರಾಜಲಾಂಛನ ಸಂಸ್ಥೆ ಚಂದಾಪುರ ಘಟಕದಿಂದ ಬುಧವಾರ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಮಾಡಿ ಮಾತನಾಡಿದರು. ಪ್ರತಿ ವಿದ್ಯಾರ್ಥಿ ಸಾಧನೆಯಿಂದ ಶಾಲೆಗೆ ಒಳ್ಳೆಯ ಹೆಸರು ಬರುವುದು ಶತಸಿದ್ಧ. ಈ ಸಾಧನೆಗೆ ಮಿತ್ರ ಸಂಚಿಕೆ ಪೂರಕವಾಗಿರುವುದರಿಂದ ಸಂಸ್ಥೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸಂಚಿಕೆ ನೀಡಲಾಗುತ್ತಿದೆ ಎಂದರು.


10ನೇ ತಗತಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜುಗೊಳ್ಳುತ್ತಿದ್ದು, ತಪ್ಪದೆ ಮಿತ್ರ ಸಂಚಿಕೆಯನ್ನು ನಿತ್ಯವೂ ಓದಬೇಕು. ಇದರಿಂದ ಪರೀಕ್ಷೆ ಎದುರಿಸುವ ಸಮಗ್ರ ಮಾಹಿತಿ ಜತೆಗೆ ಪಠ್ಯದ ಸಾಕಷ್ಟು ವಿಷಯಗಳನ್ನು ಮನನ ಮಾಡಿಕೊಳ್ಳಲು ಸಾಧ್ಯ ಎಂದರು.
ಪೊಲೀಸ್ ಅಧಿಕಾರಿ ಎಲ್.ವೈ. ರಾಜೇಶ್ ಮಾರ್ಗದರ್ಶನದಲ್ಲಿ ಸಂಸ್ಥೆ ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಒತ್ತು ನೀಡಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಸಾಧನೆಗೆ ಸಜ್ಜುಗೊಳ್ಳಬೇಕು ಎಂದರು. ವೈದ್ಯ ವಿಜಯರಾಘವ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಿತ್ರ ನೀಡಲಾಗುತ್ತಿದೆ. ಕಳೆದ ಬಾರಿ ಮಿತ್ರ ಸಂಚಿಕೆ ಓದಿದ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿದ್ದಾರೆ. ಈ ಬಾರಿಯೂ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಲಿತಾಂಶ ಪಡೆದು ಸರ್ಕಾರಿ ಶಾಲೆಯ ಶಕ್ತಿಯನ್ನು ಪ್ರದರ್ಶಿಸಬೇಕು ಎಂದರು.
ಮುಖಂಡ ಶೇಖರ್ ಮಾತನಾಡಿ, ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಶೇಖರಣೆ ಮಾಡಿಕೊಂಡು ಪರೀಕ್ಷೆಗೆ ಬೇಕಾದ ಮಾಹಿತಿಯನ್ನು ಓದಿಕೊಂಡು ಹೆಚ್ಚು ಅಂಕಗಳಿಸಿದರೆ, ಅಂತಹ ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆಯಿಂದ ಬಹುಮಾನ ನೀಡಲಾಗುವುದು ಎಂದರು.
ಚಂದಾಪುರ ರಾಜಲಾಂಛನ ಘಟಕದ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಸದಸ್ಯ ಲಿಂಗರಾಜು, ಶೇಖರ್, ಬಸವರಾಜ್, ಓಂಕಾರಪ್ಪ, ಅಡವಪ್ಪ, ಬಸಪ್ಪ, ರಾಘವೇಂದ್ರ, ರಂಗಸ್ವಾಮಿ, ಶ್ರೀನಿವಾಸ್, ನರೇಶ್, ರಾಣಿ, ಶಿಕ್ಷಕರಾದ ಕೃಷ್ಣಾರೆಡ್ಡಿ, ವಿದ್ಯಾರಾಣಿ, ಸುರೇಶ್, ದೃವರಾಜ್, ಮಧುಮಿತ್ರ, ಕರುಳಿ ವೈಶಾಲಿ, ಮಂಜುಳಾ, ಕವಿತಾ, ಪ್ರಸನ್ನ ಕುಮಾರ್, ಭಾಗ್ಯಲಕ್ಷ್ಮೀ, ನಯೀಮ್ ಉನ್ನೀಸಾ, ಮರಿಯಾ ಜೂಲಿ, ಶಾಂತಾ ಮತ್ತಿತರರು ಇದ್ದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು. ಇಷ್ಟವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಸಾಧನೆ ಸುಲಭವಾಗಲಿದೆ.
ಜಯಸೂರ್ಯ, ಚಲನಚಿತ್ರ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net