ಶೈಕ್ಷಣಿಕ ಪ್ರಗತಿಗೆ ಯೋಗಾಭ್ಯಾಸ ಸಹಕಾರಿ

CTD NEWS YOGA---------
Published on

ಚಿತ್ರದುರ್ಗ: ಯೋಗಾಭ್ಯಾಸದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ವೃದ್ಧಿಯಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಹೇಳಿದರು.

ಜಿಲ್ಲಾ ಆಯುಷ್ ಇಲಾಖೆ, ಅಳಗವಾಡಿ ಆಯುಷ್ಮಾನ್ ಆರೋಗ್ಯ ಮಂದಿರ, ಎಸ್‌ಜೆಎಂ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ನಗರದ ಎಸ್‌ಜೆಎಂ ವಸತಿ ವಿದ್ಯಾಲಯದ ಶಾಲಾ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಯೋಗಾಸನ ಪರಿಚಯಿಸುವ ಯೋಗಧನುಷ್ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಗ ಎಲ್ಲರ ಜೀವನದ ಅಂಗವಾಗಬೇಕು. ಯೋಗದಿಂದ ಶಾರೀರಿಕ ಸದೃಢತೆ ಮತ್ತು ಮಾನಸಿಕ ನೆಮ್ಮದಿ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಆಯುಷ್ ಇಲಾಖೆ ವೈದ್ಯ ಡಾ.ನಾರದಮುನಿ ಮಾತನಾಡಿ, ಯೋಗದಿಂದ ಹಲವು ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ. ನಿತ್ಯ ವ್ಯಾಯಾಮ, ಯೋಗಾಭ್ಯಾಸ ನಮ್ಮನ್ನು ನಿರೋಗಿಗಳನ್ನಾಗಿ ಮಾಡುತ್ತದೆ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಧ್ಯಾನ, ಪ್ರಾಣಾಯಾಮಗಳಿಂದ ಮೆದುಳಿಗೆ ಆಮ್ಲಜನಕದ ಹರಿವು ಹೆಚ್ಚಾಗಿ ನೆನಪಿನ ಶಕ್ತಿ ಉತ್ತಮಗೊಳಿಸುತ್ತದೆ. ಆದ ಕಾರಣ ವಿದ್ಯಾರ್ಥಿಗಳು ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಬೇಕೆಂದರು.

ಪ್ರಾಚಾರ್ಯೆ ಗಾಯತ್ರಿ, ಮುಖ್ಯಶಿಕ್ಷಕಿ ಪುಪ್ಪವಲ್ಲಿ, ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಉದಯಭಾಸ್ಕರ್, ಡಾ.ನಾರದಮುನಿ, ಡಾ.ದೇವರಾಜ್, ಡಾ.ದೇವೇಂದ್ರಪ್ಪ, ಯೋಗ ತರಬೇತಿದಾರ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net