ಶೈಕ್ಷಣಿಕ ಪ್ರಗತಿಗೆ ಇಂಗ್ಲಿಷ್ ಕಲಿಕೆ ಪೂರಕ

3 mlv 1
ತಳಗವಾದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ತರಬೇತಿ ಕಾರ್ಯಕ್ರಮಕ್ಕೆ ಚಂದ್ರ ಮೋಹನ್ ಚಾಲನೆನೀಡಿ ಮಾತನಾಡಿದರು. ಸುರೇಶ್, ಮಹದೇವಸ್ವಾಮಿ, ರವಿ, ಮಹಾದೇವಸ್ವಾಮಿ, ದೇವಯ್ಯ, ಬೋರೇಗೌಡ, ಬಸವರಾಜು, ಅಶೋಕ್‌ಕುಮಾರ್ ಇದ್ದರು.
Published on

ಮಳವಳ್ಳಿ: ಉದ್ಯೋಗದ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆಯೊಂದಿಗೆ ಕನ್ನಡವನ್ನೂ ಕರಗತ ಮಾಡಿಕೊಳ್ಳಬೇಕು ಎಂದು ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್ ಸಲಹೆ ನೀಡಿದರು.

ತಾಲೂಕಿನ ತಳಗವಾದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ರೋಟರಿ ಸಂಸ್ಥೆ ಹಾಗೂ ಮೈಸೂರಿನ ಪ್ರಥಮ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಎರಡು ತಿಂಗಳ ಉಚಿತ ಇಂಗ್ಲಿಷ್ ಕಲಿಕಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲಿಕಾ ಮಟ್ಟವನ್ನು ಉತ್ತಮಪಡಿಸಲು ಇಂಗ್ಲಿಷ್ ಮೇಳ ಆಯೋಜಿಸಲಾಗಿದ್ದು, ಶೈಕ್ಷಣಿಕ ಪ್ರಗತಿಗೆ ಇದು ಪೂರಕವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸುರೇಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಪಿಯು ಕಾಲೇಜು ಪ್ರಾಂಶುಪಾಲ ರವಿ, ಪ್ರಥಮ್ ಸಂಸ್ಥೆಯ ಸಂಯೋಜಕ ಮಹಾದೇವಸ್ವಾಮಿ, ಬ್ಲಾಕ್ ಲೀಡರ್ ದೇವಯ್ಯ, ಶಿಕ್ಷಕ ಬೋರೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಅಶೋಕ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net