

ಕಲಬುರಗಿ: ರಾಜ್ಯ ಸರ್ಕಾರ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, ರಾಜ್ಯದ ಶೈಕ್ಷಣಿಕ ಸಮಸ್ಯೆ ನಿವಾರಿಸಬೇಕು, ವಸತಿ ನಿಲಯಗಳ ವ್ಯವಸ್ಥೆ ಸರಿಪಡಿಸಬೇಕು, ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಗೆ ನೀಡಬೇಕು, ಶಿಷ್ಯ ವೇತನ ನೀಡಬೇಕು, ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಾತಿ ಶುಲ್ಕ ಕಡಿಮೆ ಮಾಡಬೇಕು ಎಂಬುದು ಸೇರಿ ವಿವಿಧ ನಿರ್ಣಯಗಳನ್ನು ಮಂಡಿಸಲಾಯಿತು.
ನಗರದ ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತದ ೪೪ನೇ ರಾಜ್ಯಮಟ್ಟದ ಸಮ್ಮೇಳನದ ಎರಡನೇ ದಿನವಾದ ಶನಿವಾರ ರಾಜ್ಯದ ಶೈP್ಷÀಣಿಕ ಸ್ಥಿತಿಗತಿ, ವರ್ತಮಾನದ ಸ್ಥಿತಿಗತಿ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿಯ ಕುರಿತು ಕರಡು ನಿರ್ಣಯಗಳು ಮಂಡಿಸಿ, ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಕೆಪಿಎಸ್‌ಸಿ ಸೇರಿ ಇತರರ ನೇಮಕ ಪರೀಕ್ಷೆಯಲ್ಲಿ ಪದೇ ಪದೆ ಅಕ್ರಮ ನಡೆಯುತ್ತಿದ್ದು, ಅಧಿಕಾರಿಗಳೇ ಶಾಮಿಲಾಗುತ್ತಿದ್ದಾರೆ. ಪರೀಕ್ಷೆಗಳ ಪಾವಿತ್ರÈ ಕಾಪಾಡಬೇಕು, ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಎಂಟು ತಿಂಗಳಲ್ಲಿ ೩೪೮ ಬಾಣಂತಿಯರು ಮೃತಪಟ್ಟಿದ್ದು, ಬಳ್ಳಾರಿ, ಚಿತ್ರದುರ್ಗ, ಬೀದರ್, ರಾಯಚೂರು, ಕಲಬುರಗಿ, ದಾವಣಗೆರೆ, ಬೆಳಗಾವಿ ಇತರೆ ಜಿಲ್ಲೆಗಳಲ್ಲಿ ನಿರಂತರ ಸಾವು ಆಗುತ್ತಿದ್ದು, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ಸ್ಥಿತಿ ಶೋಚನೀಯವಾಗಿದ್ದು, ಖಾಯಂ ಬೋಧಕ, ಬೋಧಕೇತರ ಸಿಬ್ಬಂದಿ ಭರ್ತಿ ಮಾಡಬೇಕು, ಮೂಲ ಸೌಕರ್ಯ ಒದಗಿಸಬೇಕು ಎಂದು ೪೪ನೇ ರಾಜ್ಯಮಟ್ಟದ ಸಮ್ಮೇಳನ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರಾಂತ ಅಧ್ಯP್ಷÀ ಆನಂದ ಹೊಸೂರು, ಕಾರ್ಯದರ್ಶಿ ಸಚಿವ ಕುಳಗೇರಿ ನಿರ್ಣಯಗಳನ್ನು ಮಂಡಿಸಿ, ಸರ್ಕಾರಕ್ಕೆ ಆಗ್ರಹಿಸಿದರು. ವೇದಿಕೆಯಲ್ಲಿ ಅನುಶ್ರೀ, ವಿನೋದಕುಮಾರ ಇತರರಿದ್ದರು.