ಶೈಕ್ಷಣಿಕ ಪ್ರಗತಿ ಜಿಲ್ಲೆಯಾಗಿಸಲು ಶ್ರಮಿಸಿ

05-09kodekal08
ಕೊಡೇಕಲ್ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಡಿಡಿಪಿಐ ಎಚ್.ಟಿ.ಮಂಜುನಾಥ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿದರು. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ವಠಾರ, ಮುಖ್ಯಗುರು ಶರಣಪ್ಪ, ಸುರೇಶ, ದುರ್ಗಪ್ಪ ಇತರರಿದ್ದರು.
Published on

ಕೊಡೇಕಲ್: ಶಾಲೆಯಿಂದ ಹೊರಗುಳಿದ ಮಕ್ಕಳ ಮನವೊಲಿಸಿ ಮತ್ತೆ ಅವರನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ಶಿಕ್ಷಕರಿಗೆ ಡಿಡಿಪಿಐ ಎಚ್.ಟಿ.ಮಂಜುನಾಥ ಹೇಳಿದರು.

ಹೋಬಳಿ ವಲಯದ ಕೊಡೇಕಲ್ ಸರ್ಕಾರಿ ಪ್ರೌಢಶಾಲೆ, ಗೆದ್ದಲಮರಿ, ರಾಜನಕೋಳೂರ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಶಿಕ್ಷಕರು ಗ್ರಾಮಗಳಲ್ಲಿ ಜಾಥಾ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರ ಗಮನ ಸೆಳೆಯುವ ಕಾರ್ಯ ಮಾಡಬೇಕು. ಈ ವರ್ಷ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಗುಣಮಟ್ಟ ಕಾಣುವಂತೆ ಮಕ್ಕಳನ್ನು ಸಿದ್ಧಗೊಳಿಸಿ, ಅಲ್ಲದೆ ಗುಣಾತ್ಮಕ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕೊಡೇಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೋಣೆಗೆ ತೆರಳಿ ಅಡುಗೆಗೆ ಬಳಕೆ ಮಾಡುವ ನೀರು ಮತ್ತು ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು.

ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಸನಗೌಡ ವಠಾರ, ಮುಖ್ಯಗುರು ಶರಣಪ್ಪ ಹೂಗಾರ, ಸುರೇಶ ಅರಗಂಜಿ, ದುರ್ಗಪ್ಪ, ನಿಂಗಣ್ಣ, ಭೀಮರಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net