ಶೈಕ್ಷಣಿಕ ನೆರವಿನ ಭರವಸೆ ನೀಡಿದ ಅಧಿಕಾರಿಗಳು

18. HBH. 4
Published on

ಹಗರಿಬೊಮ್ಮನಹಳ್ಳಿ: ಕೃಷ್ಣಪುರದ ವಿದ್ಯಾರ್ಥಿನಿ ಬಿ.ಪಲ್ಲವಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.94.08 ಅಂಕ ಪಡೆದಿದ್ದು, ಮುಂದಿನ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಾಲೂಕು ಆಡಳಿತದ ಅಧಿಕಾರಿಗಳು ವಿದ್ಯಾರ್ಥಿನಿಗೆ ಸೋಮವಾರ ಭರವಸೆ ನೀಡಿದರು.

ಬ್ಯಾಸಗಿದೇರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಪಲ್ಲವಿ, ಕುಟುಂಬದ ಆರ್ಥಿಕ ಸಮಸ್ಯೆಯಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಇತ್ತೀಚಿಗೆ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪಿಸಿದ್ದರಿಂದ ಪಲ್ಲವಿ, ಮಕ್ಕಳ ಸಹಾಯವಾಣಿಗೆ ದೂರು ನೀಡುವುದರೊಂದಿಗೆ ಓದಿನ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಳು.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಆರ್.ಕವಿತಾ, ಸಿಡಿಪಿಒ ಬೋರೇಗೌಡ, ಕ್ಷೇತ್ರಸಮನ್ವಯಾಧಿಕಾರಿ ಪ್ರಭಾಕರ, ಗ್ರಾಮ ಆಡಳಿತಾಧಿಕಾರಿ ಯಂಕಾರೆಡ್ಡಿ, ಪಿಡಿಒ ಚನ್ನನಾಯ್ಕ, ತಂಬ್ರಹಳ್ಳಿ ಎಎಸ್‌ಐ ಎ.ಶಿವರಾಜ ಗ್ರಾಮಕ್ಕೆ ಭೇಟಿ ನೀಡಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದರು. ಬನ್ನಿಗೋಳ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಶಿವರಾಜ, ಬ್ಯಾಸಗಿದೇರಿಯ ಹೊಸಮನೆ ಮಂಜುನಾಥ, ಕೃಷ್ಣಾಪುರದ ಕುರಿ ನಾಗೇಂದ್ರ, ಆನ್ವೇರಿ ಬಸವರಾಜ, ಕೆ.ಬಸವರಾಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net