ಶೈಕ್ಷಣಿಕ ಕ್ರಾಂತಿ ಮಾಡಿದ ಅಬಾಜಿ

9Rayabag1
Published on

ರಾಯಬಾಗ: ಸ್ವಾತಂತ್ರ್ಯ ಪೂರ್ವದಲ್ಲಿ ರಾಯಬಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಶೈಕ್ಷಣಿಕ ಕ್ರಾಂತಿ ಮಾಡಿದರು ದಿ.ವಸಂತರಾವ್ ಪಾಟೀಲ್ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.

ಪಟ್ಟಣದ ಅಬಾಜಿ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿ.ವಸಂತರಾವ್ ಪಾಟೀಲ್(ಅಬಾಜಿ) ಅವರ 12ನೇ ಪುಣ್ಯಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಸಚಿವರಾಗಿದ್ದ ಸಮಯದಲ್ಲಿ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಿಸಿ, ಈ ಭಾಗದಲ್ಲಿ ನೀರು ಹರಿಸಿ ಹಸಿರು ಕ್ರಾಂತಿ ಮಾಡಿದ ಕೀರ್ತಿ ಅಬಾಜಿ ಅವರಿಗೆ ಸಲ್ಲುತ್ತದೆ. ನಿಧನರಾಗಿ 12 ವರ್ಷ ಗತಿಸಿದರೂ ಅವರ ಹೆಸರು ರಾಜ್ಯದಲ್ಲಿ ಹಚ್ಚ ಹಸಿರಾಗಿ ಉಳಿದಿದೆ ಎಂದರು.

ಪಪಂ ಅಧ್ಯಕ್ಷ ಅಶೋಕ ಅಂಗಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪುತ್ರ ಹಾಡುಕರ, ಭಗವಂತ ಬಂತೆ, ರಮೇಶ ಕುಂಬಾರ, ಸಂಜು ಬಾವಚೆ, ಸಂಜು ಜಾಧವ, ಮಹಾದೇವ ಕೊಕಾಟೆ, ಸಂತೋಷ ದೀಪಾಳೆ, ವಸಂತ ಕಾಂಬಳೆ, ಬಾದಷಾ ಡಾಂಗೆ, ಶಿವಲಿಂಗ ಹಳಿಂಗಳಿ, ಭರಮಾ ಮಾಚಕನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net