ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

8 Hulsur 1
 ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೆಹಕರದಲ್ಲಿ ಸುಸಜ್ಜಿತ ನೂತನ ಪ್ರವಾಸಿ ಮಂದಿರಯನ್ನು ಶುಕ್ರವಾರ ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಪ್ರವೀಣ ಹನುಮಶೆಟ್ಟಿ,ಅಲ್ತಾಫ್‌ಮಿಯಾ ಹುಲಸೂರಕರ, ಗುಂಡಪ್ಪ ಗಂದಗೆ ಇತರರಿದ್ದರು.
Published on

ಹುಲಸೂರು: ಸರ್ಕಾರ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ಮಾದರಿ ಕ್ಷೇತ್ರವಾಗಿ ಮಾಡಲಾಗುವುದು ಎಂದು ಸಂಸದ ಸಾಗರ ಈಶ್ವರ ಖಂಡ್ರೆ ಹೇಳಿದರು.

ಸಮೀಪದ ಭಾಲ್ಕಿ ತಾಲೂಕಿನ ಮೆಹಕರ ಹಾಗೂ ಸಾಯಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಲ್ಲದೆ ಅನೇಕ ಕಡೆ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ಅನುದಾನ ಸಿಗುತ್ತಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಕ್ಕೆ ನಮ್ಮ ಅಭಿವೃದ್ಧಿ ಕಾರ್ಯಗಳು ಉತ್ತರವಾಗಿವೆ ಎಂದರು.

ಮೆಹಕರದಲ್ಲಿ ೮೦ ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿ ಮಂದಿರ ಉದ್ಘಾಟನೆ, ೧.೨೦ ಕೋಟಿ ರೂ. ಅನುದಾನದಡಿ ನೂತನ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿ, ೪೦ ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ , ೪ ಕೋಟಿ ರೂ. ವೆಚ್ಚದಲ್ಲಿ ಮಾದರಿ ಸರ್ಕಾರಿ ಶಾಲೆ, ೨.೧೦ ಕೋಟಿ ರೂ. ಅನುದಾನದಡಿ ರಸ್ತೆ ಸುಧಾರಣೆ ಹಾಗೂ ಸಾಯಗಾಂವದಲ್ಲಿ ೨.೫೦ ಕೋಟಿ ರೂ. ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಹಲಸಿ ತುಗಾಂವ ಗ್ರಾಪಂ ಅಧ್ಯಕ್ಷೆ ಸವಿತಾ ಪಿಚರುಟೆ, ಮೆಹಕರ ಗ್ರಾಪಂ ಅಧ್ಯಕ್ಷೆ ಶೀತಲ ಕಾಂಬಳೆ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪ್ರವೀಣ ಹನುಮಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್‌ಮಿಯಾ, ಪಿಎಸ್‌ಐ ಶಿವಕುಮಾರ ಬಳತೆ, ಪ್ರಮುಖರಾದ ಗುಂಡಪ್ಪ ಗಂದಗೆ, ಶರದ ಗಂದಗೆ, ಕವಿತಾ ದತ್ತಾತ್ರೆ ಸಾಮನೆ, ದಿಲೀಪ ಪಾಟೀಲ, ಬಲಭೀಮ ಭಾಲ್ಕೆ, ನವನಾಥ ಬೋಲಸೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net