ಶೇಖರ್​ ಸೇವೆ ಎಲ್ಲರಿಗೂ ಪ್ರೇರಣೆ

08 0
Published on

ಅಭಿನಂದನಾ ಸಮಿತಿಯಿಂದ ತುಮಕೂರಲ್ಲಿ ಗೌರವ

ತುಮಕೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡಿರುವ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷರೂ ಆದ ಟಿ.ಬಿ.ಶೇಖರ್​ ಅವರ ಸೇವಾ ಕೈಂಕರ್ಯ ಗೌರವಿಸಿ ಅಭಿನಂದನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಟಿ.ಬಿ.ಶೇಖರ್​ ದಂಪತಿಗೆ ಸನ್ಮಾನಿಸಿ ಮಾತನಾಡಿದ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ, ಹತ್ತಾರು ಸಮಾಜ ಸೇವಾ ಸಂಘಟನೆಗಳಲ್ಲಿ ತೊಡಗಿಕೊಂಡು ಸೇವಾ ಕಾರ್ಯಗಳಲ್ಲಿ ಮಾಡಿಕೊಂಡು ಬರುತ್ತಿರುವ ಟಿ.ಬಿ.ಶೇಖರ್​ ಅವರಲ್ಲಿ ಸೇವಾ ಔದಾರ್ಯತೆ ಗುಣಗಳು ಅವರ ಕುಟುಂಬದಿಂದ ಬಂದ ಕೊಡುಗೆಯಾಗಿದ್ದು ತುಮಕೂರು

ಸದಾ ಸ್ಮರಿಸಿಕೊಳ್ಳಲಿದೆ ಎಂದರು.

ತನ್ನ ಬದುಕನ್ನು ಸೇವೆ ಹಾಗೂ ತ್ಯಾಗಗೆ ಮುಡುಪಾಗಿಟ್ಟಾಗ ಅವರನ್ನು ಜನರು ಸ್ಮರಿಸಿಕೊಳ್ಳಲಿದ್ದಾರೆ. ಟಿ.ಬಿ.ಶೇಖರ್​ ಕಾಯಕ ಹಾಗೂ ದಾಸೋಹ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟುಕೊಂಡಿದ್ದರು ಅದರಂತೆ ನಡೆಯುತ್ತಿದ್ದಾರೆ. 12ನೇ ಶತಮಾನದ ಶಿವಶರಣರನ್ನು ಆದರ್ಶವಾಗಿಟ್ಟುಕೊಂಡು ಕಾಯಕದಲ್ಲಿ ತೊಡಗಿದ್ದಾರೆ ಎಂದರು. ಟಿ.ಬಿ.ಶೇಖರ್​ ಅವರ ಸೇವಾ ಕೈಂಕರ್ಯದಲ್ಲಿ ಅವರ ಕುಟುಂಬದ ಬೆಂಬಲ ಕೂಡ ಬಹುಮುಖ್ಯವಾಗಿದ್ದು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳಬೇಕು, ಹಣ ಸಂಪಾದನೆಯ ಕಡೆ ಹೋಗದೆ ನೆಮ್ಮದಿ ಹಾಗೂ ಗುಣ ಸಂಪಾದನೆಗೆ ಮೀಸಲಾಗಿಟ್ಟುಕೊಂಡ ಅವರು, ಅಯ್ಯಪ್ಪ ಸ್ವಾಮಿ ಮೇಲಿನ ನಿಷ್ಠೆ, ಭಕ್ತಿಯನ್ನು ಅನನ್ಯವಾಗಿ ಬೆಳೆಸಿಕೊಂಡರಲ್ಲದೆ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೇರಿಸಿದೆ,. ಶಬರಿಮಲೆ ಯಾತ್ರಾರ್ಥಿಗಳ ಸಮಸ್ಯೆ ನಿವಾರಣೆ, ಅನ್ನದಾನ ಕೇಂದ್ರಗಳ ಸ್ಥಾಪನೆ, ಶಬರಿಮಲೆಯನ್ನು ಪ್ಲಾಸ್ಟಿಕ್​ ಮುಕ್ತ ಮಾಡುವ ಕಾರ್ಯದ ಜತೆಗೆ ಅಲ್ಲಿ ನೆಲೆಸಿರುವ ಮಕ್ಕಳ ಶಿಕ್ಷಣಕ್ಕೆ ಗುರುಕುಲ ನಿರ್ಮಿಸಿರುವ ಕಾರ್ಯಗಳಲ್ಲಿ ಶೇಖರ್​ ಅವಿರತಶ್ರಮವಿದೆ ಎಂದರು.

ಶಾಸಕ ಸಿ.ಬಿ.ಸುರೇಶ್​ ಬಾಬು ಮಾತನಾಡಿ, 1990ರಿಂದಲೂ ನಾವು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುತ್ತಿದ್ದು, ಟಿ.ಬಿ.ಶೇಖರ್​ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ. ಅವರ ಸೌಮ್ಯಗುಣ ನನನ್ನು ಆಕರ್ಷಿಸಿದೆ. ಜ್ಯಾತ್ಯಾತಿತ ಮನೋಭಾವ ಹಾಗೂ ಮಿತ ಭಾಷೆಯನ್ನು ಅವರನ್ನು ನೋಡಿ ಕಲಿಯುವಂತಾಗಿದೆ ಎಂದರು.

ಅಟವಿ ಸುಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಭಿನಂದನಾ ಸಮಿತಿ ಅಧ್ಯಕ್ಷ ಆರ್​.ಎಲ್​.ರಮೇಶ್​ಬಾಬು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ.ಸಿ.ಸೋಮಶೇಖರ್​ ಅಭಿನಂದನಾ ನುಡಿಗಳ ನ್ನಾಡುವರು. ಮೀಜೋರಾಂನ ಮಾಜಿ ರಾಜ್ಯಪಾಲ ಕುಮನಂ ರಾಜಶೇಖರ್​ ಜೀ, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಮತ್ತಿತರರು ಇದ್ದರು.

ನಿಸ್ವಾರ್ಥ ಸೇವೆಯಿಂದ ಭಗವಂತನ ಶ್ರೇಯ: ನಿಸ್ವಾರ್ಥತೆತೆಯಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದಾಗ ಭಗವಂತ ಶ್ರೇಯಸ್ಸನ್ನು ಕೊಡುತ್ತಾನೆ. ಟಿ.ಬಿ.ಶೇಖರ್​ ಅವರು ಯಾವುದನ್ನು ನಿರೀೆ ಮಾಡದೆ ಸದಾ ಸಮಾಜದ ಒಳಿತನ್ನು ಚಿಂತನೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗಿದೆ. ಸಾಮಾಜಿಕ ಕಳಕಳಿಯುಳ್ಳ ಶೇಖರ್​ ಅವರು ತಂದೆಯನ್ನೇ ಮೀರಿಸಿದ ಸಾಧನೆ ಮಾಡಿದ್ದಾರೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ಸೇವೆ ಸಲ್ಲಿಸಿಕೊಂಡು ಬಂದಿರುವುದು ದೇವರಲ್ಲಿಟ್ಟುರವ ನಂಬಿಕೆ, ಶ್ರದ್ಧೆ ಹಾಗೂ ಅವರ ಜೀವನ ಶೈಲಿಯ ಭಾಗವಾಗಿದೆ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಬಣ್ಣಿಸಿದರು.

ನಾನು ಮಾಡಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೃದಯ ತಂಬಿ ನಂದಿದೆ, ನಾನು ಏನೇ ಸೇವೆ ಮಾಡಿದ್ದರೂ ಅದಕ್ಕೆ ನನ್ನ ಒಡನಾಡಿಗಳೇ ಕಾರಣ. ಉತ್ತಮರ ಸಂದಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ. ಹೆಸರು ಪಡೆಯಲು ಕೆಲಸ ಮಾಡಿದರೆ ಮನ್ನಣೆ ಸಿಗುವುದಿಲ್ಲ. ಯಾವುದೇ ಪ್ರತಿಲ ಇಲ್ಲದೆ ಕಾಯಕದಲ್ಲಿ ತೊಡಗಿದ್ದಾಗ ಜನಮನ್ನಣೆ ಸಾಧ್ಯ ಎಂಬುದು ನನಗೆ ಮನವರಿಕೆಯಾಗಿದೆ. ತನ್ನ ತಾಯಿ ನೀಡಿದ ಪ್ರೇರಣೆ, ಕುಟುಂಬದ ಸಹಕಾರ ನಾನು ಜನರೊಂದಿಗೆ ಸೇರಿ ಕೆಲಸ ಮಾಡಲು ಸಾಧ್ಯವಾಯಿತು.| ಟಿ.ಬಿ.ಶೇಖರ್​ ಸನ್ಮಾನಿತರುಸಾಮಾಜಿಕ ಸೇವೆ ಚೈತನ್ಯಶಕ್ತಿ ಎನ್ನಿಸಿರುವ ಟಿ.ಬಿ.ಶೇಖರ್​ ಶೋಷಿತರಿಗೆ ಬೆಲ್ಲ, ಸಕ್ಕರೆಯಾಗಿ ಸಾಮಾಜಿಕ ಸೇವೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ತುಮಕೂರು ಜನರ ಮನಸ್ಸಿನಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ಬೇರೆಯವರಿಗಾಗಿ ಬದುಕುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಂಡು ಸಮಾಜದಿಂದ ಅಭಿನಂದನೆ ಪಡೆಯುತ್ತಿದ್ದಾರೆ. | ಡಾ.ಸಿ.ಸೋಮಶೇಖರ್​, ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net