ಶೇಕಡಾ ನೂರರಷ್ಟು ಮತದಾನಕ್ಕೆ ಸಹಕರಿಸಿ: ಗಿರೀಶ್ ಎಚ್.ಡಿ

ಶೇಕಡಾ ನೂರರಷ್ಟು ಮತದಾನಕ್ಕೆ ಸಹಕರಿಸಿ: ಗಿರೀಶ್ ಎಚ್.ಡಿ
Published on

ಹಾಸನ: 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಶೇಕಡಾ ನೂರರಷ್ಟು ಮತದಾನಕ್ಕೆ ಸಹಕರಿಸುವಂತೆ ಹಾಸನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರು ತಿಳಿಸಿದರು.
ನಗರದ ಜಾಕಿ ಮತ್ತು ಗೋಕುಲದಾಸ ಕೈಗಾರಿಕಾ ಕಾರ್ಖಾನೆಗೆ ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ಹಾಗೂ ಹಾಸನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಭೇಟಿ ನೀಡಿ ಮತದಾನ ಮಾಹಿತಿಯುಳ್ಳ ಬ್ಯಾನರ್ ಅಳವಡಿಸಿ ಅಲ್ಲಿನ ಕಾರ್ಮಿಕರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು.
ಮತದಾನವೂ ಪ್ರತಿಯೊಬ್ಬರ ಹಕ್ಕಾಗಿದ್ದು ,ಇದೆ ಏ.26 ರಂದು ತಪ್ಪದೆ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡುವ ಮೂಲಕ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಇದೇ ವೇಳೆ ಹಾಸನ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಕೈಗಾರಿಕಾ ಸಂಸ್ಥೆಯ ಜೆ.ಡಿ ಸಿದ್ದರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್, ದ್ವಿತೀಯ ದರ್ಜೆ ಸಹಾಯಕ ಮೋಹನ್, ಕೃಷ್ಣೇಗೌಡ ಹಾಗೂ ಮತ್ತಿರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net