ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಿರಿ

10kdl1
Published on

ಕುಂದಗೋಳ: ತಾಲೂಕಿನ ಶಿರೂರ, ಸಂಶಿ, ಕುಂದಗೋಳ ಸೇರಿ ವಿವಿಧ ಭಾಗದಲ್ಲಿ ಶೇಂಗಾ ಬೆಳೆಗಳ ಹೊಲಗಳಿಗೆ ಮಾಜಿ ಶಾಸಕ ಎಂ.ಎಸ್. ಅಕ್ಕಿ ಅವರು ಶನಿವಾರ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು.

ರೈತರಿಗೆ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ಬೆಂಬಲ ಬೆಲೆ ದೊರೆತರೆ ಬದುಕು ಸಾಗಿಸಲು ಸಾಧ್ಯ. ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಇನ್ನೂವರೆಗೆ ಶೇಂಗಾ ಖರೀದಿ ಕೇಂದ್ರ ತೆರೆದಿಲ್ಲ. ಕೂಡಲೆ ಕೇಂದ್ರ ಸರ್ಕಾರ ಶೇಂಗಾ ಖರೀದಿ ಕೇಂದ್ರ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಾರಿ ಮುಂಗಾರಿನಲ್ಲಿ ಭಾರಿ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್​ಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶೇಖಣ್ಣ ಹರಕುಣಿ, ಸಿದ್ದಣ್ಣ ಉಳ್ಳಾಗಡ್ಡಿ, ನಿಂಗಪ್ಪ ಹಳ್ಳಿಕೇರಿ, ಆರ್.ಎನ್. ಕಮತದ, ಪರಮೇಶಪ್ಪ ನಾಯ್ಕರ, ಬಸವರಾಜ ಹೊಸಮನೆ, ನಿಂಗಪ್ಪ ಸುಣಗಾರ, ಶರೀಫ ಮದಬಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net